‘ಮುತ್ತಯ್ಯ ಮುರಳೀಧರನ್’ ಸಿನಿಮಾದಲ್ಲಿ ಮಾಸ್ಟರ್ ಬ್ಲಾಸ್ಟರ್ ಅತಿಥಿ ಪಾತ್ರ

ಚೆನ್ನೈ, ಆಗಸ್ಟ್ 02, 2019 (www.justkannada.in): ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಜೀವನಗಾಥೆಯನ್ನು ಆಧರಿಸಿದ ಸಿನಿಮಾದಲ್ಲಿ ಸಚಿನ್ ತೆಂಡೂಲ್ಕರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುತ್ತಯ್ಯ ಪಾತ್ರಧಾರಿಯಾಗಿ ತಮಿಳು ನಟ ವಿಜಯ್ ಸೇತುಪತಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.

ವಿಶ್ವಖ್ಯಾತಿಯ ಸ್ಪಿನ್ ದಿಗ್ಗಜನ ಕುರಿತಾದ ಸಿನಿಮಾ ‘800’ ನಲ್ಲಿ ಈಗಾಗಲೇ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬತ್ತಿ ಅಭಿನಯಿಸುವುದು ಪಕ್ಕಾ ಆಗಿದೆ.

ಮೂಲಗಳ ಪ್ರಕಾರ ಸಚಿನ್ ಕೂಡಾ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರಂತೆ. ಆದರೆ ಅಧಿಕೃತವಾಗಿ ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಬಂದಿಲ್ಲ.