‘ ಸಾರಾ ಕನ್ವೆಂಷನ್ ಹಾಲ್ ‘ : ಕ್ಲಿನ್ ಚಿಟ್ ನೀಡಿದ ಜಿಲ್ಲಾಧಿಕಾರಿ. ತುರ್ತು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಾರಾ ಮಹೇಶ್ ಹೇಳಿಕೆ.

 

ಮೈಸೂರು, ಜೂ.14, 2021 : (www.justkannada.in news) : ನಗರದ ದಟ್ಟಗಳ್ಳಿಯಲ್ಲಿನ ‘ ಸಾರಾ ಕನ್ವೆಂಷನ್ ಹಾಲ್ ‘ ಯಾವುದೇ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಿಲ್ಲ ಎಂದು ಪ್ರಾದೇಶಿಕ ಆಯುಕ್ತರಿಂದ ಕ್ಲಿನ್ ಚಿಟ್ ನೀಡಲಾಗಿದೆ.

ಎಡಿಸಿ ಮಂಜುನಾಥ್ ಸ್ವಾಮಿ ನೇತೃತ್ವದ ಆಯೋಗದಿಂದ ವರದಿ. ಪ್ರಾದೇಶಿಕ ಆಯುಕ್ತ ಪ್ರಕಾಶ್‌ಗೆ ವರದಿ ಸಲ್ಲಿಕೆ. ಸಾರಾ. ಕಲ್ಯಾಣ ಮಂಟಪ ಸ್ಥಳದಲ್ಲಿ ರಾಜಾ ಕಾಲುವೆ ಒತ್ತುವರಿ ಬಗ್ಗೆ ತನಿಖೆ ನಡೆಸುವಂತೆ ಕೇಳಿದ್ದ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ. ತಮ್ಮ ಪರ ವರದಿ ಬಂದ ಹಿನ್ನೆಲೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಾರಾ ಮಹೇಶ್ ಹೇಳಿದಿಷ್ಟು…

jk

ಜಿಲ್ಲಾಧಿಕಾರಿ ಇಂದು ನೀಡಿರುವ ಸಾ.ರಾ ಚೌಲ್ಟ್ರಿ ವರದಿ ಓದಿದ ಸಾ.ರಾ ಮಹೇಶ್. ಸಮೀಕ್ಷೆ ಮ್ಯಾಪ್ ತೋರಿಸಿ ಸ್ಪಷ್ಟನೆ. ಹಳ್ಳದ ಮೇಲೆ ಚೌಲ್ಟ್ರಿ ನಿರ್ಮಿತವಾಗಿಲ್ಲ. ಹಳ್ಳದ ಜಾಗವನ್ನ ಒತ್ತುವರಿ ಮಾಡಿಲ್ಲ. ಕೆಲವು ಕಡೆ 72. 73.74 ಅಳತೆಯಲ್ಲಿ ಕಂಡು ಬರುತ್ತದೆ ಎಂದು ವರದಿಯಲ್ಲಿ ಬಂದಿದೆ. 6 ಸಾವಿರ ಅಡಿ ರಿಂಗ್ ರೋಡ್ ಗೆ ನನ್ನದೇ ಜಾಗ ಕೊಟ್ಟಿದ್ದೇನೆ. ಮೈಸೂರಿನ ಋಣಕ್ಕಾಗಿ ಎರಡು ಕಡೆ ಜಾಗ ಬಿಟ್ಟಿದ್ದೇನೆ. ರಸ್ತೆಗೆ ಎರಡು ಕಡೆ ನನ್ನ ಜಾಗವನ್ನೇ ಬಿಟ್ಟಿದ್ದೇನೆ. ಇದಕ್ಕೆ ಯಾವುದೇ ಪರಿಹಾರವನ್ನು ಪಡೆದಿಲ್ಲ.

ನಾನು 10/8 ರಲ್ಲಿ‌ 30 ವರ್ಷಗಳ ಹಿಂದೆ ಎಕರೆಗೆ 90 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದೆ. ಎರಡು ಎಕರೆ ಅಕ್ರಮ ಅಂತಾ ಹೇಳಿದ್ರು, ಅಲ್ಲ ನಾನು ಖರೀದಿ ಮಾಡಿದ್ದು 4 ಎಕರೆ. ಈ ಬಗ್ಗೆ ಅವರಿಗೇ ಸರಿಯಾದ ಮಾಹಿತಿ ಇಲ್ಲ. ಲಿಂಗಾಂಬುದಿಪಾಳ್ಯ ಬಫರ್‌ಝೋನ್ ವ್ಯಾಪ್ತಿ ಸಂಬಂಧ ಪತ್ರ ಬರೆದಿದ್ದಾರೆ. 2018 ರ ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಕಾರ 30 ಮೀಟರ್ ಇದೆ. ಆದರೆ ರೋಹಿಣಿ ಸಿಂಧೂರಿ 2016 ರ ಕಾಯ್ದೆ ಪ್ರಕಾರ ಆದೇಶಗಳನ್ನ ಹೊರಡಿಸಿದ್ದಾರೆ.

ನಿಮ್ಮ ಕರ್ತವ್ಯ ಲೋಪದ ಬಗ್ಗೆ ಹೇಳಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದೀರಾ. ನಾನು ರಾಜಕಾಲುವೆ ಒತ್ತುವರಿ ಮಾಡಿದ್ರೆ ಹಿಂದೆ ಮುಂದೆ ಹಳ್ಳಕೊಳ್ಳ ಇರುತ್ತೆ ಎನ್ನುವ ಕನಿಷ್ಟ ಜ್ಞಾನವೂ ಇಲ್ಲವೇ. ದಿಶಾಂಕ್ ಸರ್ವರ್ ಮೂಲಕ ಮ್ಯಾಪ್ ತೆಗೆದುಕೊಂಡು ಬಣ್ಣ ಹಚ್ಚಿ ಇದೇ ಒತ್ತುವರಿ ಆಗಿರೋದು ಅಂತ ಹೇಳ್ತಾರೆ.

ಶ್ರೀಮತಿ ರೋಹಿಣಿ ಸಿಂಧೂರಿ ಅಂತ ಹೇಳ್ತೀವಿ. ಸಿಂಧೂರಿ ಅವರ ಗಂಡನ ಆಸ್ತಿ ವಿವರವನ್ನ ಎಲ್ಲಿ ಕೊಟ್ಟಿದ್ದಾರೆ. ಎಲ್ಲಿ ನಿಮ್ಮ ಆಸ್ತಿ ಬಗ್ಗೆ ಘೋಷಣೆ ಮಾಡಿದ್ದೀರಾ. ರೋಹಿಣಿ ಸಿಂಧೂರಿ ಕುಟುಂಬದ ಪಾರದರ್ಶಕತೆ ಪ್ರಶ್ನಿಸಿದ ಶಾಸಕ ಸಾ.ರಾ.ಮಹೇಶ್.

ಆನ್ ಲೈನ್ ಕ್ಯಾಂಪೈನ್ಗೆ ವ್ಯಂಗ್ಯ :

ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವುದು. ಆದರೆ ಅದನ್ನು ಮುಚ್ಚಿಡುವ ಸಲುವಾಗಿ ಭೂ ಮಾಫಿಯ ಆರೋಪ ಹೊರಿಸುತ್ತಿದ್ದಾರೆ. ಮತ್ತೆ ಮೈಸೂರಿಗೆ ಹಿಂದಿರುಗಲು ಸೋಷಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ.  ಅದೇನೋ ‘ ಕಂ ಬ್ಯಾಕ್ ರೋಹಿಣಿ ಸಿಂಧೂರಿ ‘ ಅಂಥ ಕ್ಯಾಂಪೇನ್ ಬೇರೆ ನಡೆಸುತ್ತಿದ್ದಾರೆ. ವಾಪಾಸ್ ಬರಲಿ, ನಾವೇನು ಬೇಡ ಅಂದ್ವಾ..? ಎಂದು ಸಾರಾ ಮಹೇಶ್ ವ್ಯಂಗ್ಯವಾಡಿದರು.

 

key words : sa.ra.mahesh-clean.chit-dc-mysore-rc-jds-mla-rohini.sindhoori