ಮೈಸೂರು, ಅ.೦೬,೨೦೨೫: ಕಾದಂಬರಿಕಾರ ಎಸ್.ಎಲ್.ಬೈರಪ್ಪ ಅವರ ಬ್ಯಾಂಕ್ ಖಾತೆಯಿಂದ ಲಕ್ಷಗಟ್ಟಲೇ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಬೈರಪ್ಪ ಅವರ ಮಡದಿ ಸರಸ್ವತಿ ಅವರು ಪೊಲೀಸರಿಗೆ ದೂರು ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ.
ಇದೇ ಜ.೨೪ ರಂದು ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸರಸ್ವತಿ ಬೈರಪ್ಪ ಅವರು ಈ ಸಂಬಂಧ ದೂರು ದಾಖಲಿಸಿದ್ದರು.
ಏನಿದೆ ದೂರಿನಲ್ಲಿ:
ನಾಗಲಕ್ಷ್ಮೀ ಹೇಮಂತ್ ಕುಮಾರ್ ಉರುಫ್ ಲಕ್ಷ್ಮೀ ಎಂಬುವವರ ವಿರುದ್ಧ ದೂರು ನೀಡಿದ್ದರು. ಪತಿ ಬೈರಪ್ಪ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆ ಜತೆಗೆ ಡಿಮೆಂಷಿಯ (ಮರೆವಿನ ಕಾಯಿಲೆ) ಇರುವುದನ್ನೇ ಅಸ್ತ್ರ ಮಾಡಿಕೊಂಡು ಕೃತ್ಯ ಎಸಗಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಬೈರಪ್ಪ ಅವರ ಬ್ಯಾಂಕ್ ಖಾತೆಗಳಿಂದ , (ಕೆನರಾ ಬ್ಯಾಂಕ್ ಹಾಗೂ ಎಸ್.ಬಿ.ಐ , ಕುವೆಂಪುನಗರ ) ೯೨ ಲಕ್ಷದ ೫೦ ಸಾವಿರ ರೂ.ಗಳನ್ನು ಡ್ರಾ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಣವನ್ನು ನಾಗಲಕ್ಷ್ಮೀ ಹೇಮಂತ್ ಕುಮಾರ್ ಉರುಫ್ ಲಕ್ಷ್ಮೀ ಕಾನೂನು ಬಾಹಿರವಾಗಿ ವಿಥ್ ಡ್ರಾ ಮಾಡಿದ್ದಾರೆ ಎಂದು ಸರಸ್ವತಿ ಬೈರಪ್ಪ ದೂರಿನಲ್ಲಿ ಆರೋಪಿಸಿದ್ದಾರೆ. ಜತೆಗೆ ಬೈರಪ್ಪ ಅವರಿಗೆ ಕೊಡುಗೆ ರೂಪದಲ್ಲಿ ಬಂದಿದ್ದ ಅಮೂಲ್ಯ ವಸ್ತುಗಳು (ಫಲಕ, ವಿಗ್ರಹಗಳು ) ಸಹ ಮನೆಯಿಂದ ಕಣ್ಮರೆಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಾರ್ಡೀಯನ್ ನೇಮಿಸಿ:
ಈ ದೂರಿನ ಆಧಾರದ ಮೇಲೆ ಮಾ.೨೯ ರಂದು ಮೈಸೂರು ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕ ಬೈರಪ್ಪ ಅವರ ಮಡದಿ ಸರಸ್ವತಿ ಹಾಗೂ ಪುತ್ರ ಉದಯಶಂಕರ್ , ಬೈರಪ್ಪ ಅವರ ಬ್ಯಾಂಕ್ ಖಾತೆ ಹಾಗೂ ಹಣಕಾಸು ನಿರ್ವಹಣೆ ಸಂಬಂಧ ಗಾರ್ಡೀಯನ್ ನೇಮಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಇದಾದ ಬಳಿಕ ಏ. ೨೨ ರಂದು ಎಸ್.ಎಲ್.ಬೈರಪ್ಪ ಅವರೇ ಖುದ್ದು ಮೈಸೂರು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಬಳಿಕ ವಿಚಾರಣೆಯನ್ನುಅ.೧೪ ಕ್ಕೆ ಕೋರ್ಟ್ ಮುಂದೂಡಿತ್ತು.
ಆದರೆ ವಿಧಿಯಾಟ ಅಷ್ಟರಲ್ಲೇ ಬೈರಪ್ಪ ಇಹಲೋಕ ತ್ಯಜಿಸಿದರು.
key words: misuse, lakhs of rupees, S.L. Byrappa, Saraswati, filed a complaint, police station, kuvempunagara, Mysore
SUMMARY:
misuse of lakhs of rupees: S.L. Byrappa’s wife Saraswati had filed a complaint with the police station.
Saraswathi had filed a complaint against Nagalakshmi Hemanth Kumar alias Lakshmi. The crime was committed using the fact that her husband Bairappa had age-related health problems and dementia as a weapon. The complaint mentions that Rs. 92 lakh 50 thousand were withdrawn from Bairappa’s bank accounts (Canara Bank and SBI, Kuvempunagar) within a period of one month.