Sunday, September 20, 2026

BDA Apartments

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೃದಯಾಘಾತದಿಂದ ನಿಧನ: ಆಸ್ಪತ್ರೆಯಿಂದ ಅಧಿಕೃ...
Home Front Page ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೃದಯಾಘಾತದಿಂದ ನಿಧನ: ಆಸ್ಪತ್ರೆಯಿಂದ ಅಧಿಕೃತ ಹೇಳಿಕೆ

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೃದಯಾಘಾತದಿಂದ ನಿಧನ: ಆಸ್ಪತ್ರೆಯಿಂದ ಅಧಿಕೃತ ಹೇಳಿಕೆ

ಬೆಂಗಳೂರು,ಸೆಪ್ಟಂಬರ್, 24,2025 (www.justkannada.in):  ನಾಡಿನ ಹಿರಿಯ ಸಾಹಿತಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್ ಭೈರಪ್ಪ(94) ಅವರು ಹೃದಯಾಘಾತದಿಂದ ನಿಧನರಾಗಿದ್ದು ಈ ಕುರಿತು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಕಾದಂಬರಿಕಾರ, ತತ್ವಜ್ಞಾನಿ, ಪದ್ಮಶ್ರೀ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್ ಎಲ್ ಬೈರಪ್ಪ ಅವರು ಇಂದು ಮಧ್ಯಾಹ್ನ 2:38 ಕ್ಕೆ ಹೃದಯ ಸ್ತಂಭನಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆ ಪ್ರಕಟಣೆ ಮೂಲಕ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೃದಯಾಘಾತದಿಂದ ನಿಧನ sl b

ಸಾಹಿತಿ ಎಸ್ ಎಲ್ ಭೈರಪ್ಪಅವರಿಗೆ ಇಬ್ಬರು ಪುತ್ರರಿದ್ದು ಒಬ್ಬ ಪುತ್ರ ಈಗಾಗಲೇ ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದಾರೆ. ಇನ್ನೊಬ್ಬ ಪುತ್ರ ಲಂಡನ್ ನಲ್ಲಿದ್ದು ನಾಳೆ ಆಗಮಿಸಲಿದ್ದಾರೆ.

Key words: writer, novelist, S.L. Bhyrappa, passes away, heart attack