ಈಗಿನ ಸಂದರ್ಭದಲ್ಲಿ ಇಂದಿರಾ ಗಾಂಧಿಯಂತೆ ಡಿಸಿಷನ್ ಮೇಕರ್ ಬರುವವರು ಕಷ್ಟ- ಆರ್.ವಿ ದೇಶಪಾಂಡೆ

ಬೆಂಗಳೂರು,ಮೇ,13,2025 (www.justkannada.in):  ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹಾಗೂ ಶಾಸಕ ಆರ್.ವಿ ದೇಶಪಾಂಡೆ, ಈಗಿನ ಸಂದರ್ಭದಲ್ಲಿ ಇಂದಿರಾ ಗಾಂಧಿಯಂತೆ ಡಿಸಿಷನ್ ಮೇಕರ್ ಬರುವವರು ಕಷ್ಟ ಎಂದು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ, ಪ್ರಧಾನ ಮಂತ್ರಿ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಯಾವುದೇ ಕಾರಣವಿಲ್ಲದೆ ಉಗ್ರ ಚಟುವಟಿಕೆಗೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಭಾರತ-ಪಾಕ್ ನಡುವೆ  ಕದನ ವಿರಾಮ ಘೋಷಿಸಲು ಮಧ್ಯಸ್ಥಿಕೆ ಮಾಡಿದ್ದೇನೆ ಎಂದಿದ್ದಾರೆ. ಆದರೆ ಪ್ರಧಾನಿ ಮೋದಿ ಅವರ ಬಾಗಿಲಿಗೆ ಹೋಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಿಂತ, ನಮ್ಮ ಪ್ರಧಾನಿಗಳು ಏನು ಹೇಳುತ್ತಾರೆ ಅದನ್ನು ವಿಶ್ವಾಸದಲ್ಲಿ ಇಡಬೇಕು ಎಂದರು.

ನಾನು ಎರಡು ಮೂರು ದಿನ ಯುದ್ಧದ ವಿಚಾರವನ್ನು ಗಮನಿಸಿದ್ದೇನೆ. ಆ ರೀತಿಯ ಚರ್ಚೆ ನಾನು ನೋಡಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯವರನ್ನು ಭಾರತ ಮಿಸ್ ಮಾಡುತ್ತಿರುವುದು ನಿಜ. ಇಂದಿರಾ ಗಾಂಧಿಯಂತೆ ಡಿಸಿಷನ್ ಮೇಕರ್ ಬರುವವರು ಕಷ್ಟ ಎಂದರು.

Key words: difficult, find , decision maker, like, Indira Gandhi, RV Deshpande