ರಷ್ಯಾ ಕಚ್ಚಾ ತೈಲದಿಂದ ಭಾರತೀಯ ಮಾರುಕಟ್ಟೆಗೆ ಸ್ಥಿರತೆ ಸಾಧ್ಯ- ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ

ಬೆಂಗಳೂರು,ಮಾರ್ಚ್,24,2022(www.justkannada.in): ಯುದ್ಧ ಆರಂಭವಾದರೆ, ಮೊದಲು ಗಗನಮುಖಿಯಾಗುವುದು ತೈಲಬೆಲೆಗಳು. ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು  ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಿಂದಾಗಿಯೂ ಪಳೆಯುಳಿಕೆಇಂಧನಗಳ ಬೆಲೆಗಳು ಏರಿಕೆಯಾಗುತ್ತಿವೆ, ಬೇಡಿಕೆಯೂ ಹೆಚ್ಚುತ್ತಿವೆ. ಇದರ ನಡುವೆಯೇ ಭಾರತವು ಮಾರುಕಟ್ಟೆಯನ್ನು ಮತ್ತು ಯುದ್ಧದಿಂದ ಅಸ್ತವ್ಯಸ್ತಗೊಳ್ಳುವ ಹಣದುಬ್ಬರವನ್ನು ಸ್ಥಿರಗೊಳಿಸಲು ರಷ್ಯಾದಿಂದ ಕಡಿಮೆಬೆಲೆಯಲ್ಲಿ ಕಚ್ಚಾತೈಲವನ್ನು ಖರೀದಿಸುತ್ತಿದೆ.

ಉಭಯ ದೇಶಗಳ ನಡುವೆ ಈಗ ಆಗಿರುವ ಒಪ್ಪಂದವು ತೈಲವನ್ನು ಮುಕ್ತಮಾರುಕಟ್ಟೆ ದರದ ಅರ್ಧದಷ್ಟು ಬೆಲೆಗೆ ಭಾರತಕ್ಕೆ ಒದಗಿಸಿಕೊಡಲಿದೆ. ಮಾರ್ಚ್ 15ರಿಂದ ವೆನೆಜುವೆಲಾದಿಂದ ತೈಲವನ್ನು ಪಡೆಯಲು ಪ್ರಾರಂಭಿಸಿದ್ದಾಗಿ ಕೇಂದ್ರಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಅಮೆರಿಕದಿಂದ ನಿರ್ಬಂಧಗಳನ್ನು ಎದುರಿಸುತ್ತಿರುವ ಇತರ ದೇಶಗಳಿಗೂ ಈ ನೀತಿಯನ್ನು ವಿಸ್ತರಿಸಲಾಗುವುದು. ಅಮೆರಿಕ-ರಷ್ಯಾ ವೈಷಮ್ಯದಿಂದ ಬಳಲುವ ಬದಲು ಆವಶ್ಯಕತೆಗೆ ಅನುಗುಣವಾಗಿ ಅಗ್ಗದ ಇಂಧನವನ್ನು ಪಡೆಯಲು ರಾಷ್ಟ್ರದನಾಯಕತ್ವವು ನಿರ್ಧರಿಸಿದ್ದರಿಂದ ಇದು ದಿಟ್ಟಕ್ರಮವೆಂದು ಹೇಳಲಾಗಿದೆ. ಚೀನಾದ ಸೇನೆಯಾದ ರೆಡ್ ಡ್ಯಾಗನ್ ಜತೆಗೆ ಸ್ಪರ್ಧಿಸಲು ಭಾರತವು ಆ ದೇಶದ ಹಾದಿಯನ್ನೇ ತುಳಿಯುತ್ತಿದೆ.

ಅದರೆ, ಭಾರತದ ಈ ನಿಲುವು ಅಮೆರಿಕದಿಂದ ತೀವ್ರ ಟೀಕೆಗೆ ಗುರಿಯಾಗಿದೆ. ರಷ್ಯಾದ ಜತೆಗೆ ಭಾರತವು ಮಾಡಿಕೊಂಡಿರುವ ತೈಲ ಒಪ್ಪಂದವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ‘ಇತಿಹಾಸದ ತಪ್ಪಾದ ಬದಿಯಲ್ಲಿ’ ಇರಿಸುತ್ತದೆ ಎಂದು ಶ್ವೇತಭವನದ ಅಧಿಕಾರಿ ಜೆನ್ಪ್ಸಾಕಿ ಹೇಳಿದರು. ಆದರೆ, ಪ್ಸಾಕಿ ಅವರ ಈ ‘ರಾಂಗ್ಡೀಲ್’ ಉಲ್ಲೇಖವು ಭಾರತದ ಮೇಲೆ ಮಾತ್ರ ಕೆಂಗಣ್ಣು ಬೀರಿದ್ದೇಕೆ? ಜರ್ಮನಿಯಂತಹ ಅಮೆರಿಕ-ಸ್ನೇಹಿರಾಷ್ಟ್ರಗಳನ್ನೇ ಅದುಬಿಟ್ಟುಬಿಟ್ಟಿದೆ. ಆ ದೇಶವು ಈಗಲೂ ರಷ್ಯಾದ ಕಚ್ಚಾತೈಲವನ್ನು ಪಡೆಯುತ್ತಿದೆ. ಪ್ಸಾಕಿಯವರೇ, ನೀವು ಜರ್ಮನಿಗೆ ಹೆದರುತ್ತಿದ್ದೀರಾ? ತನ್ನ ರಾಷ್ಟ್ರೀಯ ಹಿತಾಸಕ್ತಿಗಾಗಿ ಅಮೆರಿಕವು ಯುರೋಪನ್ನು ಹೇಗೆ ದುರುಪಯೋಗ ಮಾಡಿಕೊಳ್ಳುತ್ತದೆ, ಯುರೋಪ್ ದೇಶಗಳ ಮಧ್ಯೆ ಆಟವಾಡುತ್ತ ಹೇಗೆ ತನ್ನ ಬೇಳೆಬೇಯಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಬೇಳೆ ಬೇಯಿಸಿಕೊಳ್ಳುತ್ತಿದೆ ಅಮೆರಿಕ:

ಕುತೂಹಲಕಾರಿ ಸಂಗತಿ ಎಂದರೆ, ದಶಕಗಳಿಂದ ಅಮೆರಿಕದ ನಿರ್ಬಂಧಗಳ ಅಡಿಯಲ್ಲಿ ತತ್ತರಿಸುತ್ತಿರುವ ವೆನಿಜುವೆಲಾ ಮತ್ತು ಇರಾನ್ ಕಡೆಗೆ ಅಮೆರಿಕವು ಈಗ ಸ್ನೇಹಹಸ್ತವನ್ನು ಚಾಚುಚ್ಚಿದೆ, ಬಾಚಿತಬ್ಬಿಕೊಳ್ಳಲು ಪ್ರಯತ್ನಿಸುತ್ತಿದೆ. ಬಿಡೆನ್ ಆಡಳಿತವು ಇಂತಹ ಅಸಹ್ಯ ಹೇಳಿಕೆಗಳನ್ನು ನೀಡುವಂತೆ ಮಾಡುತ್ತಿರುವುದು ತೈಲ ಮತ್ತು ಅನಿಲವೇ? ಇಂತಹ ಸಂದೇಹ ಯಾರಿಗಾದರೂ ಬಾರದಿರದು.

ರಷ್ಯಾದ ಜತೆಗಿನ ಕಚ್ಚಾತೈಲದ ಈ ವ್ಯಾಪಾರವು ಡಾಲರ್‌ಗಳಲ್ಲಿ ನಡೆಯುತ್ತಿಲ್ಲ. ಹಾಗಾಗಿ, ನಿಮ್ಮ ವ್ಯವಹಾರ ನೀವು ನೋಡಿಕೊಳ್ಳಿ ಎಂದು ಭಾರತ ಸರ್ಕಾರವು ಬಿಡೆನ್ ಆಡಳಿತದಲ್ಲಿರುವ ಅಮೆರಿಕಕ್ಕೆ ಮುಲಾಜಿಲ್ಲದೆ ಹೇಳುವ ಸಮಯ ಬಂದಿದೆ. ರಕ್ಷಣಾ ಸಹಯೋಗ ಮತ್ತು ರಕ್ಷಣಾ ಆಮದುಗಳು ಮೇಕ್ ಇನ್ ಇಂಡಿಯಾದ ಮೇಲೆ ಗಮನಹರಿಸಲೂ ಇದೇ ನೀತಿ ಅನ್ವಯವಾಗುತ್ತದೆ. ನಿರ್ಬಂಧಗಳ ಹೊರತಾಗಿಯೂ ರಷ್ಯಾದ ಜತೆಗೆ ತನ್ನ ವ್ಯಾಪಾರವನ್ನು ಮುಂದುವರಿಸುವುದಾಗಿ ಬಾಂಗ್ಲಾದೇಶವು ಹೇಳಿದೆ. ಇಷ್ಟಾದ ಮೇಲೆ, ನಾವು ಹಾಗೆ ಮಾಡುವುದಿಲ್ಲ ಎಂದು ಹೇಳಲು ಏನಾದರೂ ಕಾರಣವಿದೆಯೇ? ಪಾಶ್ಚಿಮಾತ್ಯ ದೇಶಗಳು ಎತ್ತರದಕುದುರೆಯ ಮೇಲೆ ಕುಳಿತು ಬೇರೆದೇಶಗಳಿಗೆ ಆಜ್ಞಾಪಿಸುವ ಮನೋಭಾವದಿಂದ ಹೊರಬರಬೇಕಾಗಿದೆ ಮತ್ತು ದ್ವಿಮುಖ ಸಂಚಾರನೀತಿಯನ್ನು ವಿನಮ್ರವಾಗಿ ಅನುಸರಿಸಬೇಕು.

ಚೀನಾದ ವಿದೇಶಾಂಗ ಸಚಿವ ವಾಂಗ್ಯಿ ಅವರು ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವುದು ನಿಗದಿಯಾಗಿದೆ. ಇದು ಜೋ ಬಿಡೆನ್ ಮತ್ತು ಬೋರಿಸ್ ಜಾನ್ಸನ್ ಅವರ ನರನಾಡಿಗಳಲ್ಲೂ ಚಳಿ ಹಬ್ಬಿಸಲಿದೆ. ಏಕೆಂದರೆ, ಇದು ಖಂಡಿತವಾಗಿಯೂ ಗಾಲ್ವಾನ್ಘ ಘರ್ಷಣೆಯಾಗಿರಲು ಸಾಧ್ಯವಿಲ್ಲ. ಈ ಭೇಟಿಯ ವೇಳೆ ಅನಿರೀಕ್ಷಿತವಾಗಿ ಏನಾದರೂ ಸಂಭವಿಸಬಹುದು- ಭಾರತ ಮತ್ತು ಚೀನಾ ತಮ್ಮ ಹಳೆಯ ದ್ವೇಷಗಳನ್ನು ಹೂತುಹಾಕಲು ನಿರ್ಧರಿಸಬಹುದು. ಇಷ್ಟಾದರೆ, ಅಮೆರಿಕವು ಏಕಾಂಗಿಯಾಗುತ್ತದೆ. ಇದು ಅಮೆರಿಕದ ತವರು ನೆಲದಲ್ಲಿ ದ್ವೇಷವನ್ನು ಬಿತ್ತಬಹುದು ಎಂದು ಅಮೆರಿಕದ ಸೇನಾಕಾರ್ಯದರ್ಶಿ ಕ್ರಿಸ್ಟೀನ್ವರ್ಮುತ್ ಹೇಳಿದ್ದಾರೆ. 20 ವರ್ಷಗಳ ಯುದ್ಧಾನುಭವದ ಹೊರತಾಗಿಯೂ, ಪರಮಾಣು ಶಸ್ತ್ರಾಸ್ತ್ರಗಳೊಂದಿಗಿನ ಯುದ್ಧವಾಗಿದ್ದರೆ ಅಮೆರಿಕದಸೇನೆಯು ವಿಭಿನ್ನ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. “ಅಮೆರಿಕವು ತನ್ನ ಮಿತ್ರರಾಷ್ಟ್ರಗಳನ್ನು, ವಿಶೇಷವಾಗಿ ಭಾರತವನ್ನು, ಬೆದರಿಸಬಾರದು. ಜಾಗತಿಕಶಕ್ತಿಯಾಗಿ ಬೆಳೆಯುತ್ತಿರುವ ದಕ್ಷಿಣ ಏಷ್ಯಾದ ಈರಾಷ್ಟ್ರವನ್ನು ಬೇರೆ ದೇಶಗಳ ರೀತಿಯಲ್ಲಿ ಸಾಮಾನ್ಯವಾಗಿ ಪರಿಗಣಿಸಬಾರದು ಎಂಬ ಪಾಠವನ್ನುಇನ್ನಾದರೂ ಕಲಿಯಬೇಕಾಗಿದೆ.”

ತಾಲಿಬಾನನ್ನು ಎದುರಿಸಲಾಗದೆ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿರುವ ಅಮೆರಿಕವು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಅಮೆರಿಕಸೇನೆಯ ವಿರುದ್ಧ ಮೇಲುಗೈ ಸಾಧಿಸಿರುವುದು ತಾಲಿಬಾನ್ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅದನ್ನು ಇನ್ನಷ್ಟು ಬಲಿಷ್ಠ ಸಂಘಟನೆಯನ್ನಾಗಿ ಮಾಡಿದೆ. ಆದರೆ, ಈಗ ಉಕ್ರೇನನ್ನು ಮತ್ತೊಂದು ಅಫ್ಘಾನಿಸ್ತಾನವನ್ನಾಗಿ ಪರಿವರ್ತಿಸಲು ಅಮೆರಿಕವು ಯೋಜಿಸಿದೆ. ಈ ಪ್ರಯತ್ನದಲ್ಲಿ ಜೋಬಿಡೆನ್ ಅವರು ಜೋಸೆಫ್ಸ್ಟಾಲಿನ್ ಅವರನ್ನುಅನುಕರಿಸುತ್ತ, ಯುರೋಪಿಯನ್ ರಾಷ್ಟ್ರಗಳನ್ನು ಉದ್ದೇಶಪೂರ್ವಕವಾಗಿ ಒಳಗೊಳ್ಳಲು ಪ್ರಯತ್ನಿಸುವುದರಿಂದ ಮತ್ತು “ನಾವು ನಾವು ನ್ಯಾಟೋ ಪ್ರದೇಶದ ಪ್ರತಿ ಇಂಚಿನನ್ನೂ ರಕ್ಷಿಸುತ್ತೇವೆ” ಎಂದು ಹೇಳುತ್ತಿರುವುದರಿಂದ ಇದು ಹೆಚ್ಚು ಅಪಾಯಕಾರಿಯಾಗಿದೆ.

ಇದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಾಗಿ ಯುರೋಪಿಯನ್ ರಾಷ್ಟ್ರಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಅಮೆರಿಕದ ಧನಸಹಾಯದೊಂದಿಗೆ ಉಕ್ರೇನ್ 30 ಜೈವಿಕ ಪ್ರಯೋಗಾಲಯಗಳಲ್ಲಿ ವೈರಸ್‌ಗಳನ್ನು ಸಂಶೋಧಿಸುತ್ತಿದೆ ಮತ್ತು ಸಂಗ್ರಹಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ, ಇದು ಕೊರೊನಾವೈರಸ್ ಅನ್ನು ವಿನ್ಯಾಸಗೊಳಿಸಿದ ಪ್ರಯೋಗಾಲಯವಿರುವ ಚೀನಾಕ್ಕಿಂತ ಹೆಚ್ಚು ಅಪಾಯಕಾರಿಯಾದ ರಾಕ್ಷಸನನ್ನಾಗಿ ಉಕ್ರೇನನ್ನು ರೂಪಿಸುತ್ತದೆ.

ಆಶ್ಚರ್ಯವೆಂದರೆ, ಅಮೆರಿಕದ ಅನುದಾನದಲ್ಲಿ ನಡೆಯುತ್ತಿರುವ ಎಲ್ಲ ಜೈವಿಕ ಪ್ರಯೋಗಾಲಯದ ಚಟುವಟಿಕೆಗಳು ಸಂಪೂರ್ಣ ಪಾರದರ್ಶಕವಾಗಿರಬೇಕೆಂದು ಚೀನಾ ಮನವಿ ಮಾಡಿದೆ. ಅದೇ ರೀತಿ, ಅಮೆರಿಕ ಮತ್ತು ಇತರ ದೇಶಗಳ ಎಲ್ಲ ಜೈವಿಕ ಪ್ರಯೋಗಾಲಯವನ್ನು ಶಾಶ್ವತವಾಗಿ ಮುಚ್ಚಬೇಕೆಂದು ತುಳಸಿಗಬ್ಬಾರ್ಡ್ ಅವರು ಬಯಸುತ್ತಾರೆ. ಅಲ್ಜೀರಿಯಾ ಮತ್ತು ಕಝಾಕಿಸ್ತಾನ್‌ನಲ್ಲಿರುವ ಇಂತಹ ಜೈವಿಕಪ್ರಯೋಗಾಲಯದ ಸತ್ಯವೂ ಈಗ ಬಹಿರಂಗವಾಗಿದೆ. ಆದರೆ, ಬ್ರಿಟನ್ ಮತ್ತು ಕೆನಡಾ ಸೇರಿದಂತೆ ಪ್ರಪಂಚದಾದ್ಯಂತ ಇಂತಹ ಪ್ರಯೋಗಾಲಯಗಳನ್ನು ಸ್ಥಾಪಿಸುವ ಅಮೆರಿಕದ ನೈತಿಕತೆಯನ್ನು ನಮೂದಿಸಲು ಅಥವಾ ಪ್ರಶ್ನಿಸಲು ಪ್ಸಾಕಿಯ ಕರಾಳ ಇತಿಹಾಸದ ಭಾಗವು ವಿಫಲವಾಗಿದೆ.

ಪೆನ್ಸಿಲ್ವೇನಿಯಾದ ಪ್ರತಿನಿಧಿಗಳ ಸಭೆಗೆ ಚುನಾಯಿತರಾದ ರಿಪಬ್ಲಿಕ್ ಪಕ್ಷದ ಪ್ರತಿನಿಧಿ ಡಾನ್ಟ್ರುಯಿಟ್ ಅವರ ಪ್ರಕಾರ, “ಅಮೆರಿಕದಲ್ಲಿರುವ ಯಾರಿಗೂ ಉಕ್ರೇನ್ ಬಗ್ಗೆ ಸತ್ಯ ತಿಳಿದಿಲ್ಲ.”

ಟ್ರುಯಿಟ್ ಅವರ ಪ್ರಕಾರ, ಸೋವಿಯತ್ ಯುನಿಯನ್ ಘಟನೆಯ ಅನಂತರ ಅಲ್ಲಿ ನ್ಯಾಟೋವನ್ನು ವಿಸ್ತರಿಸುವುದಿಲ್ಲ ಎಂದು ರಷ್ಯಾಕ್ಕೆ ನೀಡಿದ್ದ ಭರವಸೆಯನ್ನು ಅಮೆರಿಕವು ಮುರಿದಿದೆ. ಆದರೆ, ಭರವಸೆಗೆ ವ್ಯತಿರಿಕ್ತವಾಗಿ ಅದು ಬಹುತೇಕ ಬ್ಲಾಕ್ (BloC) ಅನ್ನು ನ್ಯಾಟೋಗೆ ಸೇರಿಸಿದೆ. ಹೊಸ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಭಯೋತ್ಪಾದನೆಯನ್ನುಸೋಲಿಸಲು ನ್ಯಾಟೋ (NATO)ವನ್ನುವಿಸ್ತರಿಸಲು 1972ರಎಬಿಎಂ (ABM) ಒಪ್ಪಂದವನ್ನು ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ಅವರು 13 ಡಿಸೆಂಬರ್ 2001ರಂದು ರದ್ದುಗೊಳಿಸಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬಫರ್‌ ಆಗಿ ಉಕ್ರೇನ್ ಕಾರ್ಯ ನಿರ್ವಹಿಸುತ್ತಿರುವುದರಿಂದ ಪುಟಿನ್ ಯುದ್ಧವು ರಕ್ಷಣಾತ್ಮಕವಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿ ರ್ಪುಟಿನ್ ಅವರು ಸೋವಿಯತ್ ಒಕ್ಕೂಟವನ್ನು ಪುನಾರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಶ್ಚಿಮಾತ್ಯ ನಾಯಕರು ತಮ್ಮಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದರೆ ವಾಸ್ತವವೆಂದರೆ, “ಪುಟಿನ್ ಹಾಗೆ ಮಾಡುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳು ದೊಡ್ಡಸುಳ್ಳನ್ನು ಹೇಳುತ್ತಿವೆ. ಪುಟಿನ್ ಸೋವಿಯತ್ ಒಕ್ಕೂಟವನ್ನು ಪುನಾರಚಿಸುವ ಉದ್ದೇಶವನ್ನು ಹೊಂದಿಲ್ಲ. ಈ ಯುದ್ಧವು ಪಶ್ಚಿಮದ ತಪ್ಪಿನಿಂದಾಗಿದೆ, ಪುಟಿನ್ ಅವರ ಕಾರಣದಿಂದಲ್ಲ.”

ಟ್ರುಯಿಟ್ ಪ್ರಕಾರ, ಜನರೆಲ್ಲ ವ್ಯಾಪಕವಾಗಿ ನಂಬಿರುವಂತೆ, ಉಕ್ರೇನ್ ರಷ್ಯಾದ ವಿರುದ್ಧ ವೀರೋಚಿತ ರೀತಿಯಲ್ಲಿ ಹೋರಾಡುತ್ತಿಲ್ಲ. ಉಕ್ರೇನಿಯನ್ನರನ್ನು ನ್ಯಾಟೋ (NATO) ಬಲಿಕೊಡುತ್ತಿದೆ. ಜನರು ಸಾಯುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರು ರಷ್ಯಾದ ಅಧ್ಯಕ್ಷರನ್ನು ಭೇಟಿ ಮಾಡಬೇಕು ಮತ್ತು ಅವರ ನಾಲ್ಕು ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು:

  1. ಉಕ್ರೇನ್ ನ್ಯಾಟೋ (NATO) ಗೆ ಸೇರುವುದಿಲ್ಲ.
  2. ಪೂರ್ವಯುರೋಪ್‌ನಿಂದ ನ್ಯಾಟೋ (NATO)ದ ಶಸ್ತ್ರಾಸ್ತ್ರಗಳನ್ನು ಹೊರಗಿಡಬೇಕು.
  3. ನ್ಯಾಟೋ (NATO) ಕ್ಷಿಪಣಿಗಳನ್ನು ದಾಳಿ ಮಾಡಬಹುದಾದ ಅಂತರದಲ್ಲಿ ನಿಷೇಧಿಸಿ
  4. ಉಕ್ರೇನ್‌ನಲ್ಲಿ ರಷ್ಯಾದ ಎರಡು ಪ್ರಾಂತ್ಯಗಳಿಗೆ ಸ್ವಾಯತ್ತೆ ನೀಡಿ.

 

ಗಿರೀಶ್ ಲಿಂಗಣ್ಣ

ರಕ್ಷಣಾ ವಿಶ್ಲೇಷಕ

Key words:  Russia – Ukraine- war – Crude oil