ಹುಬ್ಬಳ್ಳಿ,ಅಕ್ಟೋಬರ್,15,2025 (www.justkannada.in): ಆರ್ ಎಸ್ ಎಸ್ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಎಂಎಲ್ ಸಿ ರವಿಕುಮಾರ್, ಆರ್ ಎಸ್ ಎಸ್ ಒಂದು ಸಾಮಾಜಿಕ ಸಂಘಟನೆ. ಜವಹರ್ ಲಾಲ್ ನೆಹರು ಅವರೇ ಆರ್ ಎಸ್ ಎಸ್ ಸಂಘಟನೆ ಮೆಚ್ಚಿ ಮಾತನಾಡಿದ್ದರು. ಸೇನೆ ಜೊತೆ ರೂಟ್ ಮಾರ್ಚ್ ಮಾಡಲು ನೆಹರು ಅವಕಾಶ ನೀಡಿದ್ದರು ಎಂದರು.
ಆರ್ ಎಸ್ ಬಗ್ಗೆ ತಿಳಿದ ಮಾತನಾಡಿದರೇ ಒಳ್ಳೆಯದು ಬೆದರಿಕೆ ಒಡ್ಡುವ ಸಂಘಟನೆಗಳ ಮೇಲಿನ ಕೇಸ್ ತೆಗೆದು ಹಾಕದ್ದಾರೆ. ಆರ್ ಎಸ್ಎಸ್ ಯಾರಿಗೂ ಬೆದರಿಕೆ ಹಾಕಲ್ಲ. ಯಾವುದೇ ಪ್ರಚಾರ ಇಲ್ಲದೆ ಕೆಲಸ ಮಾಡೋ ಸಂಘಟನೆ ಎಂದು ರವಿಕುಮಾರ್ ಹೇಳಿದರು.
Key words: RSS, MLC, Ravikumar, Tong, Congress,