Monday, September 14, 2026

BDA Apartments

ಸಚಿವ ಆರ್.ಅಶೋಕ್ ಸೇರಿ ಕೈ, ತೆನೆ, ಕಮಲ ಅಭ್ಯರ್ಥಿಗಳಿಂದ ಮತದಾನದ ಹಕ್ಕು ಚಲಾವಣೆ...
Home Front Page ಸಚಿವ ಆರ್.ಅಶೋಕ್ ಸೇರಿ ಕೈ, ತೆನೆ, ಕಮಲ ಅಭ್ಯರ್ಥಿಗಳಿಂದ ಮತದಾನದ ಹಕ್ಕು ಚಲಾವಣೆ…

ಸಚಿವ ಆರ್.ಅಶೋಕ್ ಸೇರಿ ಕೈ, ತೆನೆ, ಕಮಲ ಅಭ್ಯರ್ಥಿಗಳಿಂದ ಮತದಾನದ ಹಕ್ಕು ಚಲಾವಣೆ…

ಬೆಂಗಳೂರು,ನವಂಬರ್,3,2020(www.justkannada.in): ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಮತದಾನ ನಡೆಯುತ್ತಿದ್ದು, ಸಚಿವ ಆರ್.ಅಶೋಕ್, ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಸೇರಿ ಹಲವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.rr-nagar-shira-constituency-by-election-voting

ಕಂದಾಯ ಸಚಿವ ಆರ್ ಅಶೋಕ್ ಜಾಲಹಳ್ಳಿ ಸೆಂಟ್ ಕ್ಲಾರೆಟ್ ಸ್ಕೂಲ್ ನಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು. rr-nagar-shira-constituency-by-election-voting

ಇನ್ನು ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ಕುಟುಂಬಸ್ಥರೊಂದಿಗೆ  ವೋಟಿಂಗ್ ಮಾಡಿದರು.  ಹಾಗೆಯೇ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸಹ ಗಾಂಧಿ ನಗರದ ರಂಗನಾಥ ಕಾಲೇಜಿನ 171ನೇ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಹಾಗೆಯೇ ಶಿರಾ ತಾಲ್ಲೂಕಿನ  ಚಿರತೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಎಂ.ರಾಜೇಶ್‍ಗೌಡ ತಮ್ಮ ಮತ ಚಲಾಯಿಸಿದರು.

Key words: RR Nagar- shira- constituency-by election- voting