Friday, August 14, 2026

BDA Apartments

Home Front Page ನಾನೂ ಕೂಡ ಅದರ ಅಪ್ಪನಂತ ಸಿನಿಮಾ ತೆಗೆದಿದ್ದೇನೆ- ಮುನಿರತ್ನಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್…

ನಾನೂ ಕೂಡ ಅದರ ಅಪ್ಪನಂತ ಸಿನಿಮಾ ತೆಗೆದಿದ್ದೇನೆ- ಮುನಿರತ್ನಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್…

ಬೆಂಗಳೂರು,ಅಕ್ಟೋಬರ್,28,2020(www.justkannada.in): ಬೆಂಗಳೂರಿನ ಆರ್.ಆರ್ ನಗರ  ಉಪ ಚುನಾವಣಾ ಕಣ ರಂಗೇರಿದ್ದು ಮೂರು ಪಕ್ಷದ ನಾಯಕರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಟಾಂಗ್ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ನಮ್ಮ ಕುಟುಂಬಕ್ಕೆ ಯಾರೂ ಗಾಡ್ ಫಾದರ್ ಅಲ್ಲ. ನಾನೂ ಕೂಡ ಅದರ ಅಪ್ಪನಂಥಾ ಸಿನಿಮಾ ತೆಗೆದಿದ್ದೇನೆ ಎಂದು ಹೇಳಿದರು.jk-logo-justkannada-logo

ಬೆಂಗಳೂರಿನಲ್ಲಿ ಇಂದು ಪ್ರಚಾರದಲ್ಲಿ  ಪಾಲ್ಗೊಂಡು ಮಾತನಾಡಿದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ಯಾರ ಮನೆಯ ಬಾಗಿಲ ಮುಂದೆ ಹೋಗಿ ನಿಂತಿಲ್ಲ. ನಮ್ಮ ಕುಟುಂಬಕ್ಕೆ ಯಾವುದೇ ಗಾಡ್ ಫಾದರ್ ಇಲ್ಲ. ನಮಗೆ ರಾಜ್ಯದ ಆರೂವರೆ ಕೋಟಿ ಜನರೇ ಗಾಡ್ ಫಾದರ್. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಕಿಡಿಕಾರಿದರು.rr-nagar-by-election-former-cm-hd-kumaraswamy-tong-bjp-candidate-muniratna

ಅದೇನೋ ಸಿನಿಮಾ ವಿಚಾರ ಮಾತನಾಡುತ್ತಾರೆ. ನಾನು ಅದರಪ್ಪನಂಥಾ ಸಿನಿಮಾ ಮಾಡಿದ್ದೇನೆ. ಚಿತ್ರರಂಗದ ಬಗ್ಗೆಯಾಗಲಿ, ರಾಜಕೀಯದ ಬಗ್ಗೆಯಾಗಲಿ ನಾವು ಇವರಿಂದ ಕಲಿಯಬೇಕಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ  ಚಾಟಿ ಬೀಸಿದರು.

Key words: RR Nagar-by election-Former CM -HD Kumaraswamy -Tong –bjp-candidate-Muniratna