ಇಂದು ರಾಯಲ್ ಚಾಲೆಂಜರ್ಸ್-ರಾಜಸ್ಥಾನ್ ರಾಯಲ್ಸ್ ಫೈಟ್: ರನ್ ಹೊಳೆ ಹರಿಯುವ ಸಾಧ್ಯತೆ

ಬೆಂಗಳೂರು, ಏಪ್ರಿಲ್ 22, 2021 (www.justkannada.in): ಇಂದು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್​ಸಿಬಿ, ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ.

ವಾಂಖೆಡೆ ಪಿಚ್ ಸಂಪೂರ್ಣವಾಗಿ ಬ್ಯಾಟ್ಸ್​ಮನ್​ಗಳಿಗೆ ನೆರವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರನ್ ಮಳೆ ಹರಿಯುವ ಸಾಧ್ಯತೆ ಇದೆ.

ಮೊದಲು ಬ್ಯಾಟಿಂಗ್ ಮಾಡಿದ ತಂಡ, 200ಕ್ಕೂ ಅಧಿಕ ರನ್ ಕಲೆಹಾಕಿದ್ರೆ ಮಾತ್ರ ಸೇಫ್ ಟಾರ್ಗೆಟ್ ಆಗುತ್ತೆ. ಯಾಕಂದ್ರೆ ಚೇಸಿಂಗ್ ಮಾಡುವ ತಂಡಕ್ಕೆ ಇಲ್ಲಿ ಅನುಕೂಲ ಹೆಚ್ಚು.

ಸೆಕೆಂಡ್ ಬೌಲಿಂಗ್ ಮಾಡುವಾಗ ಮಂಜು ಬೀಳೋದ್ರಿಂದ, ಬೌಲರ್​ಗಳಿಗೆ ಬಾಲ್ ಮೇಲೆ ಹಿಡಿತ ಸಿಗುವುದಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಬೌಂಡರಿಗಳ ಭರ್ಜರಿ ರಸದೌತಣ ಸಿಗಲಿದೆ.