ಐಪಿಎಲ್’ನಲ್ಲಿ ಇಂದು ಧೋನಿ-ರೋಹಿತ್ ಪಡೆ ಗೆಲುವಿಗಾಗಿ ಕಾಳಗ!

ಬೆಂಗಳೂರು, ಮೇ 01, 2021 (www.justkannada.in): ಕ್ಯಾಪ್ಟನ್ ಕೂಲ್ ಎಂಎಸ್‌ ಧೋನಿ ಹಾಗೂ ರೋಹಿತ್ ಶರ್ಮಾ ನಾಯಕತ್ವದ ಟೀಂಗಳು ಇಂದು ಮುಖಾಮುಖಿಯಾಗಲಿವೆ.

ಹೌದು. ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸಲಿವೆ.

ಚೆನ್ನೈ ಸೂಪರ್‌ಕಿಂಗ್ಸ್ ಈ ಬಾರಿಯ ಐಪಿಎಲ್ ನಲ್ಲಿ 6 ಪಂದ್ಯಗಳನ್ನಾಡಿದ್ದು 5 ಪಂದ್ಯಗಳಲ್ಲಿ ಗೆದ್ದು ಕೇವಲ 1 ಪಂದ್ಯದಲ್ಲಿ ಸೋಲು ಕಂಡಿದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 6 ಪಂದ್ಯಗಳನ್ನು ಆಡಿದ್ದು 3 ರಲ್ಲಿ ಗೆದ್ದು 3 ಪಂದ್ಯ ಸೋತಿದೆ. ಐಪಿಎಲ್ ಪಾಯಿಂಟ್ ಟೇಬಲ್ ನಲ್ಲಿ 4ನೇ ಸ್ಥಾನದಲ್ಲಿದೆ.