Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ರೋಜರ್‌ ಫೆಡರರ್‌ ದಾಖಲೆ ಮುರಿದ ನೊವಾಕ್‌ ಜೊಕೋವಿಕ್‌

ರೋಜರ್‌ ಫೆಡರರ್‌ ದಾಖಲೆ ಮುರಿದ ನೊವಾಕ್‌ ಜೊಕೋವಿಕ್‌

ಸರ್ಬಿಯಾ, ಮಾರ್ಚ್ 09, 2021 (www.justkannada.in): ಸರ್ಬಿಯನ್‌ ಟೆನಿಸ್‌ ಸ್ಟಾರ್‌ ನೊವಾಕ್‌ ಜೊಕೋವಿಕ್‌ ವಿಶೇಷ ದಾಖಲೆ ಬರೆದಿದ್ದಾರೆ.

ಅತೀ ಹೆಚ್ಚು 310 ವಾರಗಳ ಕಾಲ ಪುರುಷರ ಸಿಂಗಲ್ಸ್‌ ನಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದ ರೋಜರ್‌ ಫೆಡರರ್‌ ಅವರ ದಾಖಲೆ ಜೊಕೋ ಪಾಲಾಗಿದೆ.

ಅವರು ಅಗ್ರಸ್ಥಾನದೊಂದಿಗೆ 311ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಜೊಕೋವಿಕ್‌ 2011ರ ಜುಲೈ 11ರಂದು ಮೊದಲ ಸಲ ಅಗ್ರಸ್ಥಾನ ಅಲಂಕರಿಸಿದ್ದರು.

ಪ್ರಸ್ತುತ 5ನೇ ಅವಧಿಯಲ್ಲಿ ಮುಂದುವರಿ ಯುತ್ತಿದ್ದಾರೆ. 2020ರ ಫೆಬ್ರವರಿಯಲ್ಲಿ ರಫೆಲ್‌ ನಡಾಲ್‌ ಅವರನ್ನು ಕೆಳಗಿಳಿಸಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಅವರು ಈಗಲೂ ಈ ಪಟ್ಟ ಉಳಿಸಿಕೊಂಡಿರುವುದು ವಿಶೇಷ.