‘ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿ ಮುಡಿಗೇರಿಸಿಕೊಂಡ ರೋಜರ್‌ ಫೆಡರರ್‌

ಹಾಕೆ (ಜರ್ಮನಿ), ಜೂನ್ 24, 2019 (www.justkannada.in): ರೋಜರ್‌ ಫೆಡರರ್‌ 10ನೇ ‘ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧ 7-6 (7-2), 6-1 ನೇರ ಸೆಟ್‌ ಜಯ ಸಾಧಿಸಿದರು. ಇದು ಫೆಡರರ್‌ ಗೆ 102ನೇ ಸಿಂಗಲ್ಸ್‌ ಪ್ರಶಸ್ತಿಯಾಗಿದೆ.

ಈ ಜಯದೊಂದಿಗೆ ಫೆಡರರ್‌ ಮುಂಬರುವ ವಿಂಬಲ್ಡನ್‌ ಪಂದ್ಯಾವಳಿಗೆ ಹೊಸ ಹುರುಪಿನಿಂದ ಸಜ್ಜುಗೊಂಡಂತಾಯಿತು. ವಿಂಬಲ್ಡನ್‌ನಲ್ಲಿ ಅವರು 9ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.