ಭರ್ಜರಿಯಾಗಿ ಅಭ್ಯಾಸ ಆರಂಭಿಸಿದ ರಾಬಿನ್ ಉತ್ತಪ್ಪ

ಬೆಂಗಳೂರು, ಜುಲೈ 30, 2020 (www.justkannada.in): ಟೀಮ್​ ಇಂಡಿಯಾ ಆಟಗಾರ ರಾಬಿನ್​ ಉತ್ತಪ್ಪ ಭರ್ಜರಿ ಪ್ರ್ಯಾಕ್ಟಿಸ್​ನಲ್ಲಿ ಬ್ಯುಸಿಯಾಗಿದ್ದಾರೆ.

ಐಪಿಎಲ್​ 13ನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್​ ತಂಡವನ್ನ ಉತ್ತಪ್ಪ ಪ್ರತಿನಿಧಿಸುತ್ತಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿಯನ್ನೂ ಆರಂಭಿಸಿದ್ದಾರೆ.

ತಮ್ಮ ತಂಡದ ಆಟಗಾರರ ಜೊತೆ ಪ್ರ್ಯಾಕ್ಟಿಸ್​ ಶುರು ಮಾಡಿರುವ ಅವರು, ಇನ್ಸ್​ಟಾಗ್ರಾಮ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ.

ಕಳೆದ ಐದು ವರ್ಷ ಉತ್ತಪ್ಪ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು.