ಮಂಡ್ಯ,ನವೆಂಬರ್,20,2025 (www.justkannada.in): ಶೋಕಿ ಜೀವನಕ್ಕಾಗಿ ದರೋಡೆ ಮಾಡುತ್ತಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಕಿರಣ್, ಕುಶಾಲ್ ಬಾಬು, ಗೋಕುಲ್ ಬಂಧಿತ ವಿದ್ಯಾರ್ಥಿಗಳು. ಬಂಧಿತ ಮೂವರು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ನಡುವೆ ಶೋಕಿ ಜೀವನಕ್ಕಾಗಿ ಮೂವರು ವಿದ್ಯಾರ್ಥಿಗಳು ಹೊರರಾಜ್ಯದ ಕಾರನ್ನು ಬಾಡಿಗೆ ಪಡೆದು ದರೋಡೆ ಮಾಡುತ್ತಿದ್ದರು.
ಬಸ್ ನಿಲ್ದಾಣಗಳ ಬಳಿ ನಿಂತಿರುವವರನ್ನ ಟಾರ್ಗೆಟ್ ಮಾಡುತ್ತಿದ್ದ ವಿದ್ಯಾರ್ಥಿಗಳು ಡ್ರಾಪ್ ಕೊಡುವ ನೆಪದಲ್ಲಿ ಮಂಡ್ಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತಿಗೆ ಹಗ್ಗ ಹಾಕಿ ದರೋಡೆ ಮಾಡುತ್ತಿದ್ದರು. ದರೋಡೆಯಿಂದ ಬಂದ ಹಣವನ್ನ ಬೆಟ್ಟಿಂಗ್ ಆ್ಯಪ್ ನಲ್ಲಿ ತೊಡಗಿಸುತ್ತಿದ್ದರು ಎನ್ನಲಾಗಿದೆ. ಇದೀಗ ಮೂವರು ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದು ಪೊಲೀಸರು ಬಂಧಿಸಿದ್ದಾರೆ.
Key words: Three ,students, robbing, arrested







