ಬೆಂಗಳೂರು,ನವೆಂಬರ್,25,2025 (www.justkannada.in): ಬೆಂಗಳೂರಿನಲ್ಲಿ ಹಾಡ ಹಗಲೇ ನಡೆದಿದ್ದ 7.11ಕೋಟಿ ಹಣ ದರೋಡೆ ಪ್ರಕರಣ ಸಂಬಂಧ ಶೇ 98.06 ರಷ್ಟು ಹಣ ರಿಕವರಿಯಾಗಿದ್ದು, ಈವರೆಗೆ 9 ಆರೋಪಿಗಳ ಬಂಧನವಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇಂದು ಮಾತನಾಡಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈವರೆಗೆ 7.01 ಕೋಟಿ ರೂ. ರಿಕವರಿ ಆಗಿದೆ. ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಶೇ 98.06 ರಷ್ಟು ಹಣ ರಿಕವರಿ ಆಗಿದೆ. ದರೋಡೆ ಕೇಸ್ ನಲ್ಲಿ ಈವರೆಗೆ 9 ಆರೋಪಿಗಳ ಬಂಧನವಾಗಿದೆ ಎಂದರು.
ಚೆನ್ನೈ, ಆಂಧ್ರ ಪೊಲೀಸರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಈಗಾಗಲೇ ತಂಡಕ್ಕೆ 5 ಲಕ್ಷ ರೂ ಬಹುಮಾನ ಘೋಷಣೆಯಾಗಿದೆ. ಹೆಚ್ಚುವರಿಯಾಗಿ 2 ಲಕ್ಷ ರೂ ಬಹುಮಾನ ನೀಡುತಿದ್ದೇವೆ. 9 ಆರೋಪಿಗಳನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
Key words: Robbery case, 98.06% money, recovered, Bangalore, Police Commissioner







