ಪಾಟ್ನಾದಲ್ಲಿ ರಸ್ತೆ ಅಪಘಾತ: ನಟ ಸುಶಾಂತ್ ಕುಟುಂಬದ ಆರು ಮಂದಿ ಸಾವು

ಬೆಂಗಳೂರು, ನವೆಂಬರ್ 18, 2021 (www.justkannada.in): ಬಾಲಿವುಡ್‌ನ ದಿವಂಗತ ನಟ ಸುಶಾಂತ್ ಸಿಂಗ್ ಕುಟುಂಬದ ಆರು ಮಂದಿ ಬಿಹಾರದ ಪಾಟ್ನಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ಸುಶಾಂತ್ ಸಿಂಗ್‌ರ ಸಂಬಂಧಿ ಲಾಲ್‌ಜೀತ್ ಸಿಂಗ್ (75) ಅವರ ಇಬ್ಬರು ಮಕ್ಕಳು ಅಮಿತ್ ಶೇಖರ್ ಸಿಂಗ್, ನೊಮಾನಿ ಸಿಂಗ್, ರಾಮಚಂದ್ರ ಸಿಂಗ್, ಮಗಳು ಬೇಬಿ ದೇವಿ, ಡೈಸಿ ದೇವಿ ಮತ್ತು ಡ್ರೈವರ್ ಪ್ರೀತಂ ಕುಮಾರ್ ಸಿಂಗ್ ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ಮೃತರೆಲ್ಲರೂ ಹರಿಯಾಣಾ ಪೊಲೀಸ್ ಇಲಾಖೆಯ ಎಡಿಜಿ ಒಪಿ ಸಿಂಗ್‌ರ ಸಹೋದರಿ ಗೀತಾ ದೇವಿಯ ಅಂತಿಮ ಸಂಸ್ಕಾರ ಮುಗಿಸಿಕೊಂಡು ಪಾಟ್ನಾದಿಂದ ಜಮೋಯಿಗೆ ತಮ್ಮ ಎಸ್‌ಯುವಿ ವಾಹನದಲ್ಲಿ ವಾಪಸ್ಸಾಗುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 333ಎ ನಲ್ಲಿ ಲಖಿಸಹರಿ ಜಿಲ್ಲೆಯ ಪಿಪ್ರಾ ಗ್ರಾಮದ ಬಳಿ ಬರುವಾಗ ಎಸ್‌ಯುವಿ ಕಾರು ಖಾಲಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ದೊಡ್ಡ ಲಾರಿಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.