ರಿಜ್ವಾನ್ ಅರ್ಷದ್’ಗೆ ಬೆಂಗಳೂರಿನ ಶಿವಾಜಿನಗರ ವಿಧಾನಸಭೆ ಕೈ ಟಿಕೆಟ್ ?

ಬೆಂಗಳೂರು, ನವೆಂಬರ್ 17, 2019 (www.justkannada.in): ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಟಿಕೆಟ್ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪಡೆದುಕೊಳ್ಳುತ್ತಿದ್ದಾರೆ.

ಈ ಹಿಂದಿನ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, ಗುಜರಾತ್ ರಾಜ್ಯ ಉಸ್ತುವಾರಿ ರಾಜೀವ್ ಸಾಥವ್ ಲಿಂಕ್ ಬಳಸಿ ಟಿಕೆಟ್ ಪಡೆದುಕೊಳ್ಳಲು ಕೆ.ಸಿ.ವೇಣುಗೋಪಾಲ್ ಅವರಿಗೆ ಕರೆ ಮಾಡಿಸಿದ್ದಾರೆ.

ರಾಜೀವ್ ಅವಧಿಯಲ್ಲಿ ಅರ್ಷದ್ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. ಸೋತರೆ ಮತ್ತೆ ಟಿಕೆಟ್ ಕೇಳಲ್ಲ ಇದೇ ಕೊನೆ ಬಾರಿ ಒಂದು ಅವಕಾಶ ನೀಡುವಂತೆ ಕೆ.ಸಿ.ವೇಣುಗೋಪಾಲ್ ಬಳಿ ಆಪ್ತರಾದ ರವಿ ಬೋಸರಾಜ್, ಶ್ರೀನಿವಾಸ್ ಮಾನೆಯನ್ನು ಕಳುಹಿಸಿದ್ದರು.

ಈ ಬಾರಿ ತಯಾರಿ ಮಾಡಿಕೊಂಡಿದ್ದೇನೆ ಗೆದ್ದು ಬರ್ತೀನಿ, ಟಿಕೆಟ್ ಕೊಡಿಸಿ ಅಂತ ಸಿದ್ಧರಾಮಯ್ಯ, ಜಮೀರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮೂಲಕವೂ ಒತ್ತಡ ಹಾಕಿಸಿ ದಯವಿಟ್ಟು ಅವಕಾಶ ಕೊಡಿ ಎಂದು ರಿಜ್ವಾನ್ ಅರ್ಷದ್ ಬೇಡಿಕೊಂಡಿದ್ದಾರೆ.