‘ನದಿ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಿ’: ಮೈಸೂರಿನಲ್ಲಿ ಕಾವೇರಿ ಕೂಗು ಅಭಿಯಾನ ಬೈಕ್ ಜಾಥಕ್ಕೆ ಚಾಲನೆ…

ಮೈಸೂರು,ಸೆ,6,2019(www.justkannada.in): ಇಶಾ ಫೌಂಡೇಶನ್ ಸಹಯೋಗದೊಂದಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಕಾವೇರಿ ಕೂಗು ಅಭಿಯಾನ ಬೈಕ್ ಜಾಥಕ್ಕೆ ಚಾಲನೆ ನೀಡಲಾಯಿತು.

ಕಾವೇರಿ ನದಿ ಉಳಿವಿಗಾಗಿ ಸದ್ಗುರು ಜಗ್ಗಿ ವಾಸುದೇವ ನೇತೃತ್ವದಲ್ಲಿ ಕಾವೇರಿ ಕೂಗು ಅಭಿಯಾನ ಬೈಕ್ ಜಾಥ ನಡೆಯುತ್ತಿದೆ. ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಬೈಕ್ ಜಾಥಕ್ಕೆ ರಾಜವಂಶಸ್ಥ ಯದುವೀರ ಚಾಲನೆ ನೀಡಿದರು.

ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಅಂತ್ಯದವರೆಗೆ ಈ ಜಾಗೃತಿ ಅಭಿಯಾನ ನಡೆಯುತ್ತಿದೆ. ಅರಮನೆ-ಗನ್‌ಹೌಸ್ ವೃತ್ತ ಮೂಲಕ ರಾಮಸ್ವಾಮಿ ವೃತ್ತ-ರೈಲ್ವೆ ನಿಲ್ದಾಣ-ದೊಡ್ಡ ಗಡಿಯಾರ ವೃತ್ತ ಸೇರಿದಂತೆ 5 ಕಿಲೋಮೀಟರ್ ವರೆಗೆ ಬೈಕ್ ಜಾಥ ಸಾಗಿದೆ.

ಬೈಕ್ ಜಾಥದಲ್ಲಿ ನೂರಾರು ಅನುಯಾಯಿಗಳು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸದ್ಗುರು ಜಗ್ಗು ವಾಸುದೇವ್ ಅವರು, ನದಿ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು. ಸರ್ಕಾರ ಮರೆ ಬೆಳೆಸಲು ಸಬ್ಸಿಡಿ ಕೊಡಲು ಮುಂದೆ ಬಂದಿದೆ. ಇನ್ನೆರಡು ವಾರದಲ್ಲಿ ಇದರ ಘೋಷಣೆ ಆಗಲಿದೆ. ಆಗ ಹೆಚ್ಚು ರೈತರು ಮರ ಬೆಳಸಲು ಮುಂದೆ ಬರಲು ಅನುಕೂಲ ಆಗಲಿದೆ. ಮರ ಬೆಳೆದ ರೈತನಿಗೆ ಅದರ ಹಕ್ಕು ಸಿಕ್ಕಾಗ ಮಾತ್ರ ರೈತರು ಹೆಚ್ಚು ಮರ ಬೆಳೆಸಲು ನಿಲ್ಲುತ್ತಾರೆ ಎಂದು ತಿಳಿಸಿದರು.

Key words: river survival-mysore-Kaveri kugu-Campaign- Bike Jatha