ಚೈನಾದಲ್ಲಿ ನ್ಯುಮೋನಿಯಾ ಉಲ್ಭಣ ಹಿನ್ನೆಲೆ: ಮೈಸೂರಿನಲ್ಲೂ ಅಲರ್ಟ್-ಡಿಹೆಚ್ ಒ ಕುಮಾರಸ್ವಾಮಿ.

ಮೈಸೂರು,ನವೆಂಬರ್,27,2023(www.justkannada.in): ಚೈನಾದಲ್ಲಿ ನ್ಯುಮೋನಿಯಾ ಉಲ್ಭಣ ಹಿನ್ನೆಲೆ. ದೇಶದಾದ್ಯಂತ ಆರೋಗ್ಯಧಿಕಾರಿಗಳು ಹೈ ಅಲರ್ಟ್ ಆಗಿದ್ದು, ಈ ಕುರಿತು ಮೈಸೂರು ಡಿಹೆಚ್ ಒ ಕುಮಾರಸ್ವಾಮಿ ಮಾತನಾಡಿದ್ದಾರೆ.

ಮೈಸೂರು ಜಿಲ್ಲೆಯಾದ್ಯಂತ ಉಸಿರಾಟ ತೊಂದರೆ ಸಂಬಂಧ ವೈದ್ಯಕೀಯ ಸೇವೆಗೆ ತಯಾರಿದ್ದೇವೆ. ಈಗಾಗಲೇ ಅಕ್ಸಿಜನ್ ಪ್ಲಾಂಟ್ ಗಳ ಡ್ರೈ ರನ್ ನಡೆದಿದೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ 5 ರಿಂದ 7 ಬೆಡ್ ಗಳನ್ನ ಪ್ರತ್ಯೇಕವಾಗಿ ಇರಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಸರಾಸರಿಗಿಂತ ಹೆಚ್ಚು ಜ್ವರದ ಕೇಸ್ ಗಳು ಬರುತ್ತಿಲ್ಲ. ಆದಾಗಿಯೂ ಬ್ಲಡ್ ಸ್ಯಾಂಪಲ್ ಪಡೆದು ಟೆಸ್ಟ್ ಮಾಡಲಾಗುತ್ತೆ. ಇದಕ್ಕಾಗಿಯೆ ಲ್ಯಾಬ್ ಟೆಕ್ನಿಷಿಯನ್ ಗಳನ್ನ ತೆಗೆದುಕೊಳ್ಳಲಾಗಿದೆ. ಸದ್ಯ ಮೈಸೂರಿನಲ್ಲಿ ಈ ಬಗ್ಗೆ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕುಮಾರಸ್ವಾಮಿ ಹೇಳಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಪೋಷಕರ ಮೇಲು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲವು ಈಗ ತನಿಖೆ ಹಂತದಲ್ಲಿದೆ. ತನಿಖೆಯಲ್ಲಿ ಯಾರು ಭ್ರೂಣ ಹತ್ಯೆ ಮಾಡಿಸಿದ್ದಾರೆ ಅವರ ಮಾಹಿತಿಯು ಸಿಗುತ್ತದೆ. ಭ್ರೂಣ ಹತ್ಯೆ ಕಾನೂನು ಬಾಹಿರ. ಸದ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಸ್ಪತ್ರೆಗಳು ಕೆ.ಪಿ.ಎಂ ಪ್ರಕಾರ ರೆಜಿಸ್ಟರ್ ಆಗಿಲ್ಲ ಎಂದು ಮೈಸೂರು ಜಿಲ್ಲಾ DHO ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಮಾತಾ ಆಸ್ಪತ್ರೆ. ಕರ್ನಾಟಕ ಮೆಡಿಕಲ್ ಪ್ರವೈಟ್ ಮೆಡಿಕಲ್ ಎಸ್ಟಾಬ್ಲಿಸ್ಮೆಂಟ್ ಆಕ್ಟ್( ಕೆಪಿಎಂಇ) ಅಡಿಯಲ್ಲಿ ನೊಂದಣಿ ಆಗಿಲ್ಲ. ಅದೊಂದು ಅನಧಿಕೃತ ಸಂಸ್ಥೆಯಾಗಿತ್ತು. ಅಲ್ಲಿ ಭ್ರೂಣ ಹತ್ಯೆ ಆಗಿರೋ ಬಗ್ಗೆ ಮಾಹಿತಿ ಇರಲಿಲ್ಲ. ಹೆಣ್ಣು ಭ್ರೂಣ ಪತ್ತೆ, ಹತ್ಯೆ ತಡೆಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದ್ದು. ಮಾಹಿತಿ ನೀಡಿದವರ ವಿಳಾಸ ಗೌಪ್ಯವಾಗಿಟ್ಟು, ಅಂತವರಿಗೆ 50 ಸಾವಿರ ಗೌರವ ಧನ ನೀಡಲಾಗುತ್ತದೆ ಎಂದರು.

Key words: rising -pneumonia – China-Alert – Mysore -DHO Kumaraswamy.