ಗಮನ ಸೆಳೆಯುತ್ತಿದೆ ರಿಷಬ್ ಶೆಟ್ಟಿ​ ‘ಹೀರೋ’ ಸಿನಿಮಾ ಪೋಸ್ಟರ್, ಟೀಸರ್ ರಿಲೀಸ್’ಗೆ ಡೇಟ್ ಫಿಕ್ಸ್

ಬೆಂಗಳೂರು, ಜನವರಿ 10, 2020 (www.justkannada.in): ರಿಷಬ್ ಶೆಟ್ಟಿ​ ಅವರ ಬಹು ನಿರೀಕ್ಷಿತ ಸಿನಿಮಾ ಹೀರೋ ಸಿನಿಮಾ ಟ್ರೇಲರ್​ ರಿಲೀಸ್​ಗೆ ಡೇಟ್​ ಫಿಕ್ಸ್​ ಆಗಿದೆ.

ರಿಷಭ್​ ಶೆಟ್ಟಿ ಹಾಗೂ ತಂಡವರು ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರಲಾಗದೆ ಚಿತ್ರೀಕರಣ ಮುಗಿಸಿದ್ದ ಸಿನಿಮಾವೇ ಹೀರೋ.

ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ಊರಿಗೆ ಹೋಗಿದ್ದ ರಿಷಭ್​ ಶೆಟ್ಟಿ ಆಗಲೇ ಈ ಸಿನಿಮಾದ ಪ್ಲಾನ್​ ಮಾಡಿ, ಅನ್​ಲಾಕ್​ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣ ಮುಗಿಸಿದ್ದರು. ಇದೀಗ ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಪ್ರಕಟವಾಗಿದೆ.

ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರೇಕ್ಷಕರು ಚಿತ್ರದ ಟ್ರೇಲರ್​ ಹಾಗೂ ರಿಲೀಸ್​ಗಾಗಿ ಕಾಯುತ್ತಿದ್ದಾರೆ.