ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿ ನಿರ್ಲಕ್ಷ:  ಮಕ್ಕಳ ಮುಂದೆ ರಾಜಕೀಯ ಭಾಷಣ ಬೇಕಿತ್ತಾ..? – ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ….

ಬೆಂಗಳೂರು,ಜ,3,2019(www.justkannada.in): ಪ್ರಧಾನಿ ಮೋದಿ  ಅವರು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಅಸಡ್ಡೆ ತೋರಿಸಿದ್ದಾರೆ. ಇದು ಮೋದಿ ನಡವಳಿಕೆಯಿಂದ ತಿಳಿಯುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಎರಡುದಿನಗಳ ಪ್ರಧಾನಿ ಮೋದಿ ಕಾಲ ರಾಜ್ಯಪ್ರವಾಸ ಕೈಗೊಂಡಿದ್ದ ಹಿನ್ನೆಲೆ ಈ ವೇಳೆ ರಾಜ್ಯದ ಅನುದಾನದ ಬಗ್ಗೆ ಪ್ರಸ್ತಾಪಿಸದಿದ್ದಕ್ಕೆ ಹಾಗೂ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಾಡಿದ್ದ ಭಾಷಣದ ಬಗ್ಗೆ  ಮಾಜಿ ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಠಿ ನಡೆಸಿ ಕಿಡಿಕಾರದರು.

ಪ್ರಧಾನಿ ಮೋದಿ ಅವರ ರಾಜ್ಯ ಪ್ರವಾಸ ಸ್ವಾಗತಿಸುತ್ತೇವೆ. ವಿಪಕ್ಷ ನಾಯಕನಾಗಿ ನಾನು ಸ್ವಾಗತಿಸುತ್ತೇನೆ.  ಪ್ರಧಾನಿ ಹುದ್ದೆ ಯಾವ ಪಕ್ಷಕ್ಕೂ ಸೇರಿದ್ದಲ್ಲ.  ಬಹಳದಿನಗಳ ನಂತರ ಮೋದಿ ಅವರು ರಾಜ್ಯಕ್ಕೆ ಬಂದಿದ್ದಾರೆ.  ಪ್ರವಾಹದ ವೇಳೆ ಜನ ಸಾಕಷ್ಟು ಸಂಕಷ್ಟ ಅನುಭವಿಸಿದರು, ಮನೆಗಳನ್ನ ಆಸ್ತಿಪಾಸ್ತಿಯನ್ನ ಕಳೆದುಕೊಂಡರು. ಆದರೆ ರಾಜ್ಯದ ನೆರೆ ಸಂಕಷ್ಟಕ್ಕೆ ಮೋದಿ ಸ್ಪಂದಿಸಿಲ್ಲ. ರಾಜ್ಯದಲ್ಲಿ ಭೀಕರ ಪ್ರವಾಹ ಬಂದಾಗ ಮೋದಿ ಬರಲಿಲ್ಲ.  ಜನರ ಕಷ್ಟ ಸುಖ ಕೇಳಬೇಕಾಗಿರುವುದು ಪ್ರಧಾನಿ ಕರ್ತವ್ಯ. ಆದರೆ ಮೋದಿ ಅವರು ಕನಿಷ್ಟ ಟ್ವಿಟ್ ಮಾಡಿಯೂ ಕಷ್ಟ ಸುಖದ ಬಗ್ಗೆ ಕೇಳಲಿಲ್ಲ ಎಂದು ಹರಿಹಾಯ್ದರು.

ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದರು. ಆದರೆ, ಭಾಗ್ಯದ ಬಾಗಿಲ ವಿಷಯ ಬಿಡಿ, ನಮ್ಮ ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ಮನೆಯ ಬಾಗಿಲು ಕೂಡ ತೆರೆದಿಲ್ಲ ಎಂಬುದು ಬೇಸರದ ಸಂಗತಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ನಿನ್ನೆ ಪ್ರಧಾನಿ ಮೋದಿ ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳ ಮುಂದೆ ಯಾವ ರೀತಿಯ ಮಾತನಾಡಬೇಕಿತ್ತು? ಶಾಲಾ ಮಕ್ಕಳ ಎದುರು ಅವರ ಭವಿಷ್ಯದ ಬಗ್ಗೆ ಮಾತನಾಡಬೇಕಿತ್ತು. ಅದರ ಬದಲು ಅಲ್ಲೂ ಹೋಗಿ ರಾಜಕೀಯ ಮಾತನಾಡಿ ಬಂದಿದ್ದಾರೆ. ಮಕ್ಕಳ ಮುಂದೆ ರಾಜಕೀಯ ಭಾಷಣ ಬೇಕಿತ್ತಾ..? ಮಕ್ಕಳ ಮುಂದೆ ಸಿಎಎ ಬಗ್ಗೆ ಹೇಳಿದ್ದು ಎಷ್ಟು ಸರಿ…?  ಹೀಗಾಗಿ  ಕೊಳಕು ರಾಜಕೀಯ ಭಾಷಣ ಎಂದು ಟ್ವಿಟ್ ಮಾಡಿದ್ದೆ ಎಂದು ಸಿದ್ದರಾಮಯ್ಯ  ತಿಳಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ  ಪ್ರವಾಹ ಬಂದಾಗ ಕೇಂದ್ರ ಸರ್ಕಾರ ಸ್ಪಂದಿಸಿತ್ತು. ಮನ್ ಮೋಹನ್ ಸಿಂಗ್ ಜನರ ಕಷ್ಟ ಆಲಿಸಿದ್ದರು. ಮಧ್ಯಂತರ ಪರಿಹಾರ ನೀಡಿದ್ದರು. ಆದರೆ ಈಗ ನೆರೆಪರಿಹಾರದ ಬಗ್ಗೆ ಮಾತನಾಡಲು ಮೋದಿ ಅವಕಾಶ ನೀಡಲಿಲ್ಲ ಎಂದು ಟೀಕಿಸಿದರು.

ನಾನು ಸಿಎಂ ಆಗಿದ್ದ ವೇಳೆ ಮೋದಿ ಅವರು ತುಮಕೂರಿಗೆ ಬಂದಿದ್ದರು. ಫುಡ್ ಪಾರ್ಕ್ ಉದ್ಘಾಟನೆ ಮಾಡಿದ್ದರು. ಪುಡ್ ಪಾರ್ಕ್ ಉದ್ಘಾಟನೆ ವೇಳೆ 10 ಸಾವಿರ ಉದ್ಯೋಗ ಸೃಷ್ಠಿಯಾಗುತ್ತೆ. ಪರೋಕ್ಷವಾಗಿ 20ಸಾವಿರ ಉದ್ಯೋಗ ಸೃಷ್ಠಿಯಾಗುತ್ತೆ ಎಂದಿದ್ರು. ಆದ್ರ ಯಾವುದೇ ಉದ್ಯೋಗ ಸೃಷ್ಠಿಯಾಗಿಲ್ಲ.  ಈ ಮಾತುಗಳನ್ನ ಮೋದಿ ಒಮ್ಮೆ ನೆನಪಿಸಿಕೊಳ್ಳಬೇಕಿದೆ ಎಂದು ಟಾಂಗ್ ನೀಡಿದರು.

key words: Prime Minister- Modi -careless – Karnataka-Former CM- Siddaramaiah