ಬೆಂಗಳೂರು,ಅಕ್ಟೋಬರ್,15,2025 (www.justkannada.in): ಮೂವರು ಮಾಹಿತಿ ಹಕ್ಕು ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಡಾ. ವಿನ್ಸೆಂಟ್ ಡಿಸೋಜಾ ಅವರನ್ನ ಬೆಂಗಳೂರು ಬೆಂಚ್ ನ ಆಯುಕ್ತರನ್ನಾಗಿ ಬಿ.ವೆಂಕಟಸಿಂಗ್ ಅವರನ್ನ ಕಲ್ಬುರ್ಗಿ ಬೆಂಚ್ ನ ಮಾಹಿತಿ ಆಯುಕ್ತರನ್ನಾಗಿ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರ ಅವರನ್ನ ಬೆಂಗಳೂರು ಬೆಂಚ್ ನ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯ ಮಾಹಿತಿ ಆಯೋಗದಲ್ಲಿ ಖಾಲಿಯಿರುವ ಮೂರು ಮಾಹಿತಿ ಆಯುಕ್ತರ ಹುದ್ದೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ವಿನ್ಸೆಂಟ್ ಡಿಸೋಜಾ , ವೆಂಕಟಸಿಂಗ್ ಮತ್ತು ಮಹೇಶ್ ವಾಳ್ವೇಕರ್ ಅವರ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಇದೀಗ ಮೂವರನ್ನ ಮಾಹಿತಿ ಆಯುಕ್ತರನ್ನಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
Key words: Government, appointment, three Member, Right to Information Commissioners