ತಂಬಾಕು ಬೆಳೆಗೆ ಸೂಕ್ತ ಬೆಲೆ ನೀಡಿ: ರೈತರ ಸಂಕಷ್ಟಕ್ಕೆ ನೆರವಾಗಿ- ಮಾಜಿ ಸಂಸದ ಆರ್.ಧೃವನಾರಾಯಣ್ ಆಗ್ರಹ…

ಮೈಸೂರು,ನವೆಂಬರ್,14,2020(www.justkannada.in):  ತಂಬಾಕು ಬೆಳೆಗಾರರು ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತು ತಂಬಾಕು ಬೆಳೆಗೆ ಸೂಕ್ತ ಬೆಲೆ ನೀಡಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಆಗ್ರಹಿಸಿದ್ದಾರೆ.right-price-tobacco-crops-former-mp-r-dhruvanarayan-mysore

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್, ತಂಬಾಕು ಬೆಳೆಗಾರರು ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ತಂಬಾಕು ಬೆಳೆಗಾರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದರು. right-price-tobacco-crops-former-mp-r-dhruvanarayan-mysore

ಹುಣಸೂರು, ಎಚ್ ಡಿ ಕೋಟೆ, ಪಿರಿಯಾಪಟ್ಟಣದಲ್ಲಿ ಹೆಚ್ವಿನ ಬೆಳೆ ಬೆಳೆಯುತ್ತಾರೆ. 2019-20 ರಲ್ಲಿ 2.63 ಲಕ್ಷ ಟನ್ ರಫ್ತಾಗಿದೆ. ಈ ತಂಬಾಕು ಬೆಳೆಯಿಂದ 3.90 ಕೋಟಿ ಉದ್ಯೋಗ ಅವಕಾಶ ಸಿಗುತ್ತಿದೆ. ಇದರಿಂದ ಸರ್ಕಾರಕ್ಕೆ ಸಾವಿರ ಕೋಟಿ ಲಾಭ ಬರುತ್ತಿದೆ‌. ಆದರೂ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸಿಗರೇಟು ತಯಾರಿಕಾ ಕಂಪನಿಗಳು ಸಾವಿರಾರು ಕೋಟಿ ಲಾಭ ಮಾಡುತ್ತಿವೆ. ಆದರೆ ತಂಬಾಕು ಮಂಡಳಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಅದ್ಧರಿಂದ ಸರ್ಕಾರ ಕೂಡಲೇ ಎಚ್ವೆತ್ತು ತಂಬಾಕು ಬೆಳಗೆ ಸೂಕ್ತ ಬೆಲೆ ನೀಡಬೇಕು. ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ್ ಆಗ್ರಹಿಸಿದರು.

English summary…

Former MP R. Dhruvanarayan urges government to provide suitable price for tobacco crop
Mysuru, Nov. 14, 2020 (www.justkannada.in): In a press meet held at the Patrakartara Bhavana here today, former MP of Chamarajanagara expressed his concern by stating the tobacco growers are not getting suitable price for their hard earned crop. Hence, he requested the govt. to shoulder responsibility and help them by providing an appropriate price.
He expressed his anguish saying, while the cigarette companies are making lot of profits the tobacco growers are facing hardship.

Key words: right price –tobacco- crops- Former MP -R. Dhruvanarayan -mysore