ಬೈಕ್ ಅಪಘಾತದಲ್ಲಿ ಸವಾರ ಸಾವು: ಕೆರೆಯಲ್ಲಿ ಇಬ್ಬರು ಬಾಲಕರು ನೀರು ಪಾಲು.

ಮೈಸೂರು,ಜೂನ್,17,2024 (www.justkannada.in): ಇತ್ತೀಚಿನ ದಿನಗಳಲ್ಲಿ ಅಪ‍ಘಾತ ಇನ್ನಿತರ ಕಾರಣಗಳಿಂದ ಸಾವುನೋವುಗಳು ಹೆಚ್ಚುತ್ತಿದ್ದು ಈ ಮಧ್ಯ ಮೈಸೂರು ಜಿಲ್ಲೆಯಲ್ಲಿ ಅಪಘಾತದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದರೇ ಇತ್ತ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಹುಡುಗರು ನೀರು ಪಾಲಾಗಿದ್ದಾರೆ.

ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿ ನಡೆದಿದೆ. ಶ್ರೀಕಂಠ (51) ವರ್ಷ ಮೃತ ಬೈಕ್ ಸವಾರ. ರಸ್ತೆ ಮಧ್ಯೆ ವಿಭಜಕಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾರೆ. ಶ್ರೀಕಂಠ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ ನೌಕರರ ಸಂಘದ ಅಧ್ಯಕ್ಷರಾಗಿದ್ದು, ಪರಶುರಾಮ ದೇಗುಲದಿಂದ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಹುಡುಗರು ನೀರು ಪಾಲು.

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಹುಡುಗರು ನೀರು ಪಾಲಾದ ಘಟನೆ ಮೈಸೂರಿನ ಸಾಹುಕಾರಹುಂಡಿ ಕೆರೆಯಲ್ಲಿ ನಡೆದಿದೆ.  ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ (16), ಬಸವನಪುರ ನಿವಾಸಿ ಜಸ್ವಂತ್ (14) ಮೃತಪಟ್ಟವರು. ನಿನ್ನೆ ಮುಸ್ಸಂಜೆ ವೇಳೆ ಕೆರೆಗೆ ಈಜಲು ಇಬ್ಬರು ಯುವಕರು ತೆರಳಿದ್ದರು.

ಈಜುವ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಇಲವಾಲ ಪೊಲೀಸ್ ಠಾಣೆ ಪೊಲೀಸರು  ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬಾಲಕ ಸಾವು.

ಮನೆಯಲ್ಲಿ ವಿದ್ಯುತ್ ಶಾಕ್ ಬಾಲಕ ಸಾವನ್ನಪ್ಪಿರುವ ಘಟನೆ ಮೈಸೂರು ತಾಲ್ಲೂಕು ದೇವಗಳ್ಳಿ ಗ್ರಾಮದಲ್ಲಿ ನಡೆದಿದೆ. ಭವಿತ್ (7) ವರ್ಷ ಮೃತ ಬಾಲಕ. ಮೃತ ಭವಿತ್ ಸುಂದರೇಶ್ ಎಂಬುವವರ ಪುತ್ರ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಅವಘಡ ಸಂಭವಿಸಿದೆ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Rider, dies,  bike accident, mysore