ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಆರ್ ಐ

ಬೆಂಗಳೂರು,ನವೆಂಬರ್,9,2023(www.justkannada.in): ಲಂಚ ಸ್ವೀಕರಿಸುವ ವೇಳೆ ಬೆಂಗಳೂರಿನ ಮಹದೇವಪುರದ ಆರ್ ಐ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹದೇವಪುರ ಆರ್​ಐ ವಸಂತ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೃಷಿ ಭೂಮಿಗೆ ಖಾತಾ ಪೋಡಿ ಮಾಡಿಕೊಡಲು 28 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆರ್​ಐ ವಸಂತ್ ಅವರು ಈಗಾಗಲೇ 3.5 ಲಕ್ಷ ಹಣ, 4 ಲಕ್ಷದ ಚೆಕ್ ಪಡೆದಿದ್ದಾರೆ. 4 ಲಕ್ಷ ರೂ. ಪಡೆಯುವಾಗ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ವಸಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ವಸಂತ್​ ಮನೆಯಲ್ಲಿದ್ದ 9 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: RI – Lokayukta- trap -accepting -bribe