ಸಮ್ಮಿಶ್ರ ಸರ್ಕಾರ ಪತನದ ಕಾರಣವನ್ನ ಸದ್ಯದಲ್ಲಿಯೇ ಬಹಿರಂಗಪಡೆಸುತ್ತೇನೆ- ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

ಬೆಳಗಾವಿ,ಜು,26,2019(www.justkannada.in):  ಸಮ್ಮಿಶ್ರ ಸರ್ಕಾರದ ಪತನಕ್ಕೆ  ಕಾರಣವಾದ ಸಂಗತಿಯನ್ನು ಕೆಲವೇ ದಿನಗಳಲ್ಲಿ  ಬಹಿರಂಗಪಡಿಸುತ್ತೇನೆ ಎಂದು ಮಾಜಿ ಸಚಿವ,  ಶಾಸಕ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ  ಸತೀಶ್ ಜಾರಕಿಹೊಳಿ,ರಾಜ್ಯದಲ್ಲಿ ಜಾರಕಿಹೊಳಿ ಕುಟುಂಬದ ಬಗ್ಗೆ ತಪ್ಪು ಸಂದೇಶ ಹೋಗಬಾರದು. ಇತಿಹಾಸದಲ್ಲಿ ಜಾರಕಿಹೊಳಿ‌ ಕುಟುಂಬಕ್ಕೆ ಕೆಟ್ಟ ಹೆಸರು ಬರಬಾರದು. ಅದು ಇತಿಹಾಸದಲ್ಲಿ ಉಳಿದು ಹೋಗುತ್ತದೆ. ಹೀಗಾಗಿ ಕೆಲವೇ ದಿನಗಳಲ್ಲಿ ಬಹಿರಂಗ ಮಾಡ್ತೀನಿ ಎಂದರು

ರಮೇಶ ಜಾರಕಿಹೊಳಿ ಸೇರಿದಂತೆ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದು ಸ್ವಾಗತಾರ್ಹ ಎಂದ ಅವರು, ಅನರ್ಹತೆ ಪ್ರಕರಣ ಇತ್ಯರ್ಥಕ್ಕೆ 1 ವರ್ಷ ಬೇಕು. ನಮ್ಮ ಪರ ತೀರ್ಪು ಬಂದ್ರೆ ಅವರು ಕೋರ್ಟ್‌ಗೆ ಹೋಗುತ್ತಾರೆ. ಅವರ ಪರ ತೀರ್ಪು ಬಂದ್ರೆ ನಾವು‌ ಕೋರ್ಟ್​​ಗೆ ಹೋಗುತ್ತೇವೆ ಎಂದಿದ್ದಾರೆ.

ಬಿಜೆಪಿ ತಮ್ಮ ಆಡಳಿತದ ಚುಕ್ಕಾಣೆ ಹಿಡಿಯಲು  ಇನ್ನು ಶಾಸಕರ ಬೆಂಬಲ ಬೇಕು. ಬೆಂಬಲ ದೊರಯುತ್ತೆ ಅನ್ನೋದು ಬಹುತೇಕ ಖಚಿತವಿಲ್ಲ. ಇದನ್ನು  ಬಿಜೆಪಿ ಹೈ ಕಮಾಂಡ್ ಕೂಡ ತಿಳಿಸಿದೆ. ರಾಜ್ಯಪಾಲರು ಎಲ್ಲವನ್ನು ನಿರ್ಣಯಿಸುತ್ತಾರೆ ಎಂದು ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

Key words:  reveal – cause -collapse – coalition government  former minister- Satisha jarakihulli