ತೆಲಂಗಾಣ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆಯಾಗುವ ಸಾಧ್ಯತೆ: ಇಂದು ಪ್ರಮಾಣ ವಚನ ಸ್ವೀಕಾರ.

ಹೈದರಾಬಾದ್,ಡಿಸೆಂಬರ್,4,2023(www.justkannada.in): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದು ಸರ್ಕಾರ ರಚಿನೆಗೆ ಸಿದ್ದತೆ ನಡೆಸಿದೆ. ಈ ಮಧ್ಯೆ ಇಂದು ರಾತ್ರಿ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನಸ್ವೀಕಾರ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ.

ತೆಲಂಗಾಣ ಮುಖ್ಯಮಂತ್ರಿ ಸ್ಥಾನಕ್ಕೆ ರೇವಂತ್ ರೆಡ್ಡಿ ಆಯ್ಕೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ  ಶಾಸಕಾಂಗ ಸಭೆ ನಡೆದಿದ್ದು, ಈಗಾಗಲೇ ರೇವಂತ್ ರೆಡ್ಡಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇಂದು ರಾತ್ರಿ ರಾತ್ರಿ 8 ಗಂಟೆಗೆ ತೆಲಂಗಾಣ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದು, ತೆಲಂಗಾಣ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಕೆಲ ಹೊತ್ತಿನಲ್ಲೇ  ಎಐಸಿಸಿ ಅಧ್ಯಕ್ಷರು ಸಿಎಂ ಹೆಸರು ಪ್ರಕಟಿಸಲಿದ್ದಾರೆ.

Key words: Revanth Reddy- likely- to be- elected – Telangana CM