Monday, September 28, 2026

BDA Apartments

ಸೈಟ್ ವಾಪಸ್ ನೀಡುವ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ- ಸ್ನೇಹಮಯಿ ಕೃಷ...
Home Front Page ಸೈಟ್ ವಾಪಸ್ ನೀಡುವ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ- ಸ್ನೇಹಮಯಿ ಕೃಷ್ಣ

ಸೈಟ್ ವಾಪಸ್ ನೀಡುವ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ- ಸ್ನೇಹಮಯಿ ಕೃಷ್ಣ

ಮೈಸೂರು, ಅಕ್ಟೋಬರ್,1,2024 (www.justkannada.in): ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ನೀಡುವ ಪತ್ರದ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ದೂರುದಾರ ಸ್ನೇಹಮಯಿ ಕೃಷ್ಣ, 14 ಸೈಟ್ ವಾಪಸ್ಸು ಕೊಡುತ್ತಿರುವುದು ನ್ಯಾಯಾಲಯದಲ್ಲಿ ನಮಗೆ ಅನುಕೂಲವಾಗಲಿದೆ. ನಾವು ಹೋರಾಟ ಮಾಡಿದ ಆರಂಭದಲ್ಲೇ ಅವರು ಸೈಟ್ ನೀಡಬೇಕಿತ್ತು. ಆ ಸಂದರ್ಭದಲ್ಲಿ ಸೈಟ್ ನೀಡದೆ ಭಂಡತನ ತೋರಿದ್ದರು. ಅವರ ಹಿಂಬಾಲಕರು ಹೇಳಿದರೂ ಅವರ ಮಾತು ಕೇಳಿರಲಿಲ್ಲ. ಈಗ ಅವರ ಪತ್ನಿ ಮೂಲಕ ವಾಪಸ್ಸು ಕೊಡಿಸಿದ್ದಾರೆ ಎಂದರು.

ಕಾನೂನಲ್ಲಿ ಹೆಣ್ಣು ಮಕ್ಕಳು- ಗಂಡು ಮಕ್ಕಳು ಎಂಬ ಬೇಧವಿಲ್ಲ. ತಪ್ಪು ಎಸಗಿರುವುದು ಸತ್ಯವಾಗಿರುವ ಕಾರಣ ಒಪ್ಪಿಕೊಂಡಂತೆ ಆಗಿದೆ. ನನ್ನ ಹೋರಾಟ ಕೇವಲ 14 ಸೈಟ್ ವಾಪಸ್ ಕೊಡಿಸುವುದಲ್ಲ ಮುಡಾದಲ್ಲಿ ನೂರಾರು ಮಂದಿ ವಾಪಸ್ಸು ಸೈಟ್ ಗಳನ್ನ ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಸೈಟ್ ವಾಪಸ್ ನೀಡುವ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ VTU TOP BANNER 04

Key words: returning, site, CM Siddaramaiah, Snehamai Krishna