ಧರ್ಮಸ್ಥಳಕ್ಕೆ ಹೊರಟಿದ್ದ ನಿವೃತ್ತ ಪೊಲೀಸ್ ಸಿಬ್ಬಂದಿ ಶವವಾಗಿ ಪತ್ತೆ.

ಬೆಂಗಳೂರು,ಮಾರ್ಚ್,7,2023(www.justkannada.in):  ಧರ್ಮಸ್ಥಳಕ್ಕೆ ಹೊರಟಿದ್ಧ ನಿವೃತ್ತ ಪೊಲೀಸ್ ಸಿಬ್ಬಂದಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ಮದುರಹೊಸಹಳ್ಳಿ ನಿವಾಸಿ ಮುನಿಆಂಜನೇಯ(65) ಶವವಾಗಿ ಪತ್ತೆಯಾಗಿರುವವರು.  ಮುನಿಅಂಜನೇಯ ಗೆಳೆಯರ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದರು.  ನಿನ್ನೆ ಮಧ್ಯಾಹ್ನ 2ಗಂಟೆಗೆ ಮನೆ ಬಿಟ್ಟಿದ್ದ ಮುನಿಅಂಜನೇಯ ಇಂದು ಬೆಳಿಗ್ಗೆ 3ಗಂಟೆಯಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಇನ್ನು ಮುನಿಆಂಜನೇಯ ಅವರ ಬಳಿ ಇದ್ದ ನಗದು ಚಿನ್ನಾಭರಣ ನಾಪತ್ತೆಯಾಗಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಮೃತದೇಹವನ್ನು  ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Key words: retired- police- found- dead-bangalore