Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್.

ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್.

ಗುಂಡ್ಲುಪೇಟೆ, ಡಿಸೆಂಬರ್,26,2023(www.justkannada.in):  ಹೊಸ ವರ್ಷ ಸಂಭ್ರಮಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು,  ಈ ಮಧ್ಯೆ ಚಾಮರಾಜನಗರದ  ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ.

ಬಂಡೀಪುರದಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಎರಡು ದಿನಗಳ ಕಾಲ ಅಂದರೆ ಡಿಸೆಂಬರ್ 31 ಮತ್ತು ಜನವರಿ 1 ರಂದು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಬಂಡೀಪುರ  ಅರಣ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಮಾತ್ರ ಅನ್ವಯವಾಗಲಿದ್ದು, ಜಂಗಲ್ ರೆಸಾರ್ಟ್, ಖಾಸಗಿ ರೆಸಾರ್ಟ್, ಹೋಂ ಸ್ಟೇಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಈ ಕುರಿತು ಬಂಡಿಪುರದ ಸಿಎಫ್ ಡಾ.ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ bandipur

ಕೆಲವು ವರ್ಷಗಳಿಂದ ಬಂಡೀಪುರದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ  ಅರಣ್ಯ ಇಲಾಖೆ ನಿಷೇಧ ಹೇರುತ್ತಿದೆ. ಸಂಭ್ರಮಾಚರಣೆಯ ಹೆಸರಿನಲ್ಲಿ ವನ್ಯ ಜೀವಿಗಳಿಗೆ ತೊಂದರೆ ನೀಡುವ ಸಾಧ್ಯತೆ  ಹಿನ್ನಲೆ ನಿಷೇಧ ವಿಧಿಸಲಾಗುತ್ತಿದೆ. ವಾರಾಂತ್ಯದಲ್ಲಿ ಬಂಡಿಪುರದ ವಸತಿ ಗೃಹಗಳಿಗೆ ಬಹು ಬೇಡಿಕೆ ಉಂಟಾಗಿದ್ದು,  ಮೋಜು,ಮಸ್ತಿ ಮಾಡಲು ಬರುವ ಪ್ರವಾಸಿಗರಿಗೆ ಸರ್ಕಾರಿ ವಸತಿ ಗೃಹಗಳಲ್ಲಿಅವಕಾಶ ಸಿಗುವುದಿಲ್ಲ. ಇನ್ನು ಹೊಸ ವರ್ಷಾಚರಣೆಯಲ್ಲಿ ಎಂದಿನಂತೆ ಸಫಾರಿ ವ್ಯವಸ್ಥೆ ಇರಲಿದೆ.

Key words: Restrictions – New Year -celebrations -Bandipur