Saturday, August 15, 2026

BDA Apartments

Home Front Page ಜವಾಬ್ದಾರಿ ದೊಡ್ಡದಿದೆ: ರಾಜ್ಯದ  ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕೆಲಸ ಮಾಡ್ತೇನೆ- ಬಿಜೆಪಿ ಕಚೇರಿಯಲ್ಲಿ ನಿಯೋಜಿತ...

ಜವಾಬ್ದಾರಿ ದೊಡ್ಡದಿದೆ: ರಾಜ್ಯದ  ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕೆಲಸ ಮಾಡ್ತೇನೆ- ಬಿಜೆಪಿ ಕಚೇರಿಯಲ್ಲಿ ನಿಯೋಜಿತ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ..

ಬೆಂಗಳೂರು,ಜು,26,2019(www.justkannada.in):  ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ನಿಯೋಜಿತ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಸಂಜೆ 6 ಗಂಟೆಗೆ ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದು ಇದಕ್ಕೂ ಮುನ್ನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ  ಭಾಷಣ ಮಾಡಿದರು.

ಒಂದು ವರ್ಷದಿಂದ ರಾಜ್ಯದ ಜನ ಚಾತಕ ಪಕ್ಷಿಯಂತೆ  ಕಾಯುತ್ತಿದ್ದರು.  ಅಭಿವೃದ್ದಿಗಾಗಿ ಜನರು ಎದುರು ನೋಡುತ್ತಿದ್ದರು. ಹೀಗಾಗಿ  ನನ್ನ ಜವಾಬ್ದಾರಿ ದೊಡ್ಡದಿದೆ. ಜನರಲ್ಲಿ ಆಕಾಂಕ್ಷೆ ಹೆಚ್ಚಿದೆ.  ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತೇನೆ.  ಪ್ರತಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಬಿ.ಎಸ್ ಯಡಿಯೂರಪ್ಪ ಸಿದ್ಧತೆ ನಡೆಸಿದ್ದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ರಾಜಭವನ ಸಜ್ಜಾಗಿದೆ.

Key words: responsibility –huge-Development work -expectations – people  -CM BS Yeddyurappa