ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸುವೆ: ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಈ.ಸಿ. ನಿಂಗರಾಜ್ ಗೌಡ

ಹಾಸನ: ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಲಾಗುವುದು ಹಾಗೂ ವಿವಿಧ ಸಮಸ್ಯೆಗಳಿಗೆ ಗಮನಸೆಳೆಯುವ ಕೆಲಸ ಮಾಡುವುದಾಗಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಈ.ಸಿ. ನಿಂಗರಾಜ್ ಗೌಡ ತಿಳಿಸಿದರು.

ನಗರದ ಬೇಲೂರು ರಸ್ತೆಯಲ್ಲಿರುವ ಹೆರಿಟೇಜ್ ಕ್ಲಬ್ ಸಭಾಂಗಣದಲ್ಲಿ ನಡೆದ ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಡಾ. ಈ.ಸಿ. ನಿಂಗರಾಜುಗೌಡರ ಸ್ನೇಹ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ೧೯೯೪ ರಿಂದ ನಾನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತುನಲ್ಲಿ, ಮಂಡ್ಯ ನಗರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಮೈಸೂರು ವಿಭಾಗದ ಪ್ರಮುಖರಾಗಿ, ರಾಜ್ಯ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಹಾಸನದಲ್ಲಿ ನಡೆದಂತಹ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಹಾಸನದ ಎಲ್ಲಾ ತಾಲೂಕು, ಹೋಬಳಿ ಭಾಗಗಳು ನನಗೆ ಪರಿಚಯವಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯಲ್ಲಿ ನಾನು ಗುರುತಿಸಿಕೊಂಡಿದ್ದೇನೆ ಎಂದರು. ಮೊದಲಿನಿಂದಲೂ ಸಂಘಟನೆಗಳಲ್ಲಿ ಕೆಲಸ ಮಾಡುತ್ತಲೇ ಇದ್ದು, ಇನ್ನಷ್ಟು ಒಳ್ಳೆ ಕೆಲಸ ಮಾಡುವ ನಿಟ್ಟಿನಲ್ಲಿ ರಾಜಕೀಯದಲ್ಲಿ ಅಧಿಕಾರ ಪ್ರಮುಖವಾಗಿದೆ. ಮಂಡ್ಯ, ಮೈಸೂರು, ಚಾಮರಾಜ ನಗರದಲ್ಲಿ ಈಗಾಗಲೇ ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದು, ಈಗ ಹಾಸನದಲ್ಲಿ ಸಭೆ ಮಾಡಿ ಪ್ರತಿಯೊಬ್ಬರಿಂದಲೂ ಸಲಹೆ ಪಡೆಯುತ್ತಿದ್ದೇನೆ. ಒಬ್ಬ ಅಭ್ಯರ್ಥಿಯಾಗಿ ನಾನೋಬ್ಬನೇ ನಿರ್ಧಾರ ಮಾಡಿದರೇ ಸಾಲದು ನಮ್ಮ ಜೊತೆ ಇರುವವರು ನಾನೇ ಅಭ್ಯರ್ಥಿ ಎಂದು ಕೆಲಸ ಮಾಡಿದರೇ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಂದಿನ ವರ್ಷ ಜೂನ್ ಮೂರನೇ ವಾರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಪದವಿ ಆದವರು ಯಾರು ನೋಂದಣಿ ಮಾಡಿಸಿಕೊಂಡಿದ್ದಾರೆ ಅವರು ಮಾತ್ರ ಮತ ಹಾಕಲು ಅವಕಾಶ ಕೊಡಲಾಗಿದೆ. ಇದುವರೆಗೂ ಪದವೀಧರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದವರು ಸಮಸ್ಯೆ ಬಗ್ಗೆ ಯಾವ ಗಮನಸೆಳೆಯುವ ಕೆಲಸ ಮಾಡುವುದಿಲ್ಲ ಹಾಗೂ ಯಾವುದೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿಲ್ಲ. ಪದವಿಪೂರ್ವ ೧೪,೭೮೦ ಜನ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಅವರಿಗೆ ೬ ತಿಂಗಳ ಸಂಬಳ ಕೊಡದಿರುವುದು, ತೀರ ಕಡಿಮೆ ಸಂಬಳ ಕೊಡಲಾಗುತ್ತಿದೆ ಹಾಗೂ ಅವರಿಗೆ ಯಾವ ಸೇವಾ ಭದ್ರತೆಯು ಕೂಡ ಇರುವುದಿಲ್ಲ. ಇನ್ನು ಖಾಯಂ ಕೂಡ ಆಗಿರುವುದಿಲ್ಲ. ಇವರ ಸಮಸ್ಯೆ ಬಗೆ ಹರಿಸಲು ಇದುವರೆಗೂ ಯಾರು ಸಹ ಮುಂದಾಗಿರುವುದಿಲ್ಲ. ನಾವು ಈ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಇದೆ ಸಂದರ್ಭದಲ್ಲಿ ಹೇಳಿದರು. ಇನ್ನು ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ನಿಟ್ಟಿನಲ್ಲಿ ನಮ್ಮ ಹೋರಾಟ ಇದ್ದರ ಇರುತ್ತದೆ ಎಂದು ತಮ್ಮ ಉದ್ದೇಶಗಳನ್ನು ಇದೆ ಸಂದರ್ಭದಲ್ಲಿ ತಿಳಿಸಿದರು.

ಮಾಜಿ ಸೆನೆಟ್ ಸದಸ್ಯರಾದ ಜಗದೀಶ್ ಮಾತನಾಡಿ, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಈ.ಸಿ. ನಿಂಗರಾಜು ಸ್ನೇಹಬಳಗದಿಂದ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ಪದವಿಪೂರ್ವ ಕ್ಷೇತ್ರದ ಚುನಾವಣೆ ಬಹಳ ವರ್ಷದಿಂದ ನಡೆಯುತ್ತಲೆ ಇದ್ದು, ಅತಿಥಿ ಉಪನ್ಯಾಸಕರುಗಳ ಸಮಸ್ಯೆ ಬಗ್ಗೆ ಯಾವ ರಾಜಕೀಯ ಪಕ್ಷದವರು ಹೋರಾಟ ಮಾಡಲಿಲ್ಲ. ಈ ಬಗ್ಗೆ ಅಭ್ಯರ್ಥಿ ನಿಂಗರಾಜು ಅವರಿಗೆ ತಿಳಿದಿದ್ದು, ಯುವ ಜನರ ಸಮಸ್ಯೆಗಳ ಅರಿವು ಇವರಿಗೆ ಇದೆ.​ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಶಿಕ್ಷಣದ ಕ್ಷೇತ್ರದ ಹಾಗೂ ಹೋಗುಗಳ ಬಗ್ಗೆ ಗಮನವಿದ್ದು ಎಲ್ಲವೂ ಬಗೆ ಹರಿಸುವ ಸ್ವ ಪ್ರಯತ್ನವನ್ನು ಮಾಡುತ್ತಾರೆ ಎಂದರು.

ಹೊಸದಾಗಿ ಪದವೀಧರರು ನೊಂದಾಯಣಿ ಮಾಡಿಸಬೇಕು. ಈ ಚುನಾವಣೆಯನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಹೊಸ ಮುಖಗಳಿಗೆ ಅವಕಾಶ ಕೊಡಬೇಕು. ಬೂತ್ ವಾರು ತಂಡ ಮಾಡಿಕೊಂಡು ನಿಂಗರಾಜುಗೌಡರಿಗೆ ಅತಿ ಹೆಚ್ಚು ಮತಗಳನ್ನು ಹಾಸನ ಜಿಲ್ಲೆಯಿಂದ ಕೊಡಬೇಕೆಂದು ಕೋರಿದರು.​ ಇದೆ ವೇಳೆ ಉದ್ಯಮಿ ಕೆ.ಎನ್. ಸಂತೋಷ್, ಕೆ.ಎಸ್.ಆರ್.ಟಿ.ಸಿ. ಯೂನಿಯನ್ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಾಷ್ಟ್ರೀಯ ಕಲಾವಿದರಾದ ಶಂಕರಪ್ಪ, ಮೀನಾಕ್ಷಿ, ದಿನೇಶ್, ನಟೇಶ್, ನರೇಶ್ ಇತರರು ಉಪಸ್ಥಿತರಿದ್ದರು.