ಸಚಿವ ಡಾ.ನಾರಾಯಣಗೌಡರ ಮನವಿಗೆ ತಕ್ಷಣವೇ ಸ್ಪಂದನೆ : ಕೆಎಸ್‌ಎಂಬಿ ಬ್ರಾಂಚ್‌ ಗೆ ಜಾಗ ಗುರುತು ಮಾಡಿದ ಯುಪಿ ಸರ್ಕಾರ.

0
2

ವಾರಣಾಸಿ, ನವೆಂಬರ್,18,2021(www.justkannada.in):  ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಆವರ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸ್ಪಂದಿಸಿದೆ.

ವಾರಣಾಸಿಯ ಸಾರಂಗ್ ತಲಾಬ್ ಪ್ರದೇಶದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಶಾಖೆ ತೆರೆಯಲು ಯುಪಿ ಸರ್ಕಾರ ಜಾಗ ನೀಡಲು ಒಪ್ಪಿದೆ.  ಸಾರಂಗ್ ತಲಾಬ್ ಪದ್ರೇಶದಲ್ಲಿ ಕೆಎಸ್‌ಎಂಬಿ ಶಾಖೆ ತೆರೆಯಲು ನೀಡಲು ಒಪ್ಪಿರುವ ಕಟ್ಟಡದ ಜಾಗಕ್ಕೆ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಎಸ್ಎಂಬಿ ಕಚೇರಿ ಹಾಗೂ ಗೋದಾಮಿಗೆ ನೀಡಲು ಉದ್ದೇಶಿತ ಕಟ್ಟಡ ಪರಿಶೀಲನೆ ನಡೆಸಿದರು. ಶೀಘ್ರವೇ ಯುಪಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡು, ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

Key words: responded- immediately- UP government -marking – KSMB- branch- Minister- Narayana Gowda