11 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಂಗಳವಾರ ಮುಂದಿನ ಕ್ರಮ- ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ…

ಬೆಂಗಳೂರು,ಜು,6,2019(www.justkannada.in):  ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಂಗಳವಾರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, 11 ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ.  ಅವರು ರಾಜೀನಾಮೆ ನೀಡುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಯಾರೊಬ್ಬರೂ ನನ್ನ ಅಪಾಂಯಟ್ ಮೆಂಟ್ ತೆಗೆದುಕೊಂಡಿರಲಿಲ್ಲ. ನಾನು ಇಲ್ಲ ಅಂತಾ ಶಾಸಕರನ್ನ ವಾಪಸ್ ಕಳುಹಿಸಿಲ್ಲ.  ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ಪತ್ರ ನೀಡುವಂತೆ ಕಾರ್ಯದರ್ಶಿಗೆ ಸೂಚಿಸಿರುವೆ ಎಂದರು.

ಹಾಗೆಯೇ ಅತೃಪ್ತರು ರಾಜಭವನಕ್ಕಾದರೂ ಹೋಗಲಿ. ಎಲ್ಲಿಗಾದರೂ ಹೋಗಲಿ.  ನನ್ನ ಅಧಿಕಾರ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತೇನೆ.  ಸಂವಿಧಾನ ಬದ್ಧವಾಗಿ ನಾನು ಕೆಲಸ ಮಾಡುತ್ತೇನೆ. ಸೋಮವಾರ ನನಗೆ ಪೂರ್ವನಿಗದಿತ ಕೆಲಸ ಇರುವುದರಿಂದ ಅಂದು ನಾನು ಇರಲ್ಲ. ಹೀಗಾಗಿ ಮಂಗಳವಾರ 11 ಶಾಸಕರ ರಾಜೀನಾಮೆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದರು.

Key words: resignation-rebelMLAs- Tuesday-  Speaker -Ramesh Kumar -clarified.