ಮಾಂಸಾಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥ ಪ್ರಕರಣ: ಪ್ರಾಂಶುಪಾಲರ ಅಮಾನತು ಮಾಡಿ ಆದೇಶ..

ಚಾಮರಾಜನಗರ,ಜುಲೈ,19,2023(www.justkannada.in): ಮಾಂಸಾಹಾರ ಸೇವಿಸಿ 20ಕ್ಕೂ ಹೆಚ್ಚು ವಸತಿ ಶಾಲಾ ಮಕ್ಕಳು ಅಸ್ವಸ್ಥ ಪ್ರಕರಣ ಸಂಬಂಧ. ಮೊರಾರ್ಜಿ ದೇಸಾಯಿ ಪ್ರಾಂಶುಪಾಲರನ್ನ  ಅಮಾನತು ಮಾಡಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಯಡವನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಅವರನ್ನ ಅಮಾನತು ಮಾಡಲಾಗಿದೆ.  ಕಳೆದ ಭಾನುವಾರ ಮಾಂಸಾಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತಿಗೆ ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಚಾಮರಾಜನಗರ ಸಮಾಜ ಕಲ್ಯಾಣ ಇಲಾಖೆ ಡಿಡಿ ಪತ್ರ ಬರೆದಿದ್ದರು.  ಶಿಫಾರಸು ಪರಿಗಣಿಸಿ ಕರ್ತವ್ಯ ಲೋಪ ಮೇರೆಗೆ ಪ್ರಾಂಶುಪಾಲ ಕುಮಾರಸ್ವಾಮಿ ಅವರನ್ನ ಅಮಾನತು ಮಾಡಿ ರಾಜ್ಯ  ಶಿಕ್ಷಣ ಇಲಾಖೆ ಕಾರ್ಯ ನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Key words: Residential- school- children- sick- eating –meat-suspend -principal..