ಮೈಸೂರು,ಜನವರಿ,5,2026 (www.justkannada.in): ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಾಳೆ ಭಾರತದ ಶಾಸ್ತ್ರೀಯ ಭಾಷೆಗಳ ಸಂಶೋಧನಾ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ನಾಳೆ ಬೆಳಿಗ್ಗೆ 10:30ಕ್ಕೆ ನವದೆಹಲಿಯ, ನವ ಮೋತಿ ಬಾಗ್ ನಲ್ಲಿರುವ ಕೌಶಲ್ಯ ಭವನದಲ್ಲಿ ಶಾಸ್ತ್ರೀಯ ಕನ್ನಡ, ಮಲಯಾಳಂ, ಓಡಿಯಾ, ತಮಿಳು ಮತ್ತು ತೆಲುಗು ಈ ಶಾಸ್ತ್ರೀಯ ಭಾಷೆಗಳ ಕುರಿತ ಸಂಶೋಧನಾ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದ್ದಾರೆ.
ಈ ಪ್ರಕಟಣೆಗಳಲ್ಲಿ ಮೈಸೂರು, ಮಾನಸಗಂಗೋತ್ರಿಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನ (ಭಾ.ಭಾ.ಸಂ.)ದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಭಾಷಾ ಅಧ್ಯಯನಗಳ ಕೇಂದ್ರಗಳು ಸಿದ್ಧಪಡಿಸಿರುವ ಶಾಸ್ತ್ರೀಯ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳ 41 ಸಾಹಿತ್ಯಿಕ ಕೃತಿಗಳು ಸೇರಿವೆ. ಜೊತೆಗೆ, ಚೆನ್ನೈಯಲ್ಲಿರುವ ಕೇಂದ್ರ ಶಾಸ್ತ್ರೀಯ ತಮಿಳು ಸಂಸ್ಥೆ (ಸಿಐಸಿಟಿ) ಸಿದ್ಧಪಡಿಸಿರುವ ಶಾಸ್ತ್ರೀಯ ತಮಿಳಿನ 13 ಪುಸ್ತಕಗಳು ಹಾಗೂ ತಿರುಕ್ಕುರಳ್ ಸಂಜ್ಞಾ ಭಾಷಾ ಶ್ರೇಣಿಯೂ ಇದರಲ್ಲಿ ಒಳಗೊಂಡಿದೆ.
Key words: Union Minister, release, research works, Indian classical languages







