ಗಣರಾಜ್ಯೋತ್ಸವ ಸಾರ್ವಜನಿಕರ ಪ್ರವೇಶ ನಿಷೇಧ : ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್

ಬೆಂಗಳೂರು,ಜನವರಿ,24,2021(www.justkannada.in) : ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26ರಂದು ಕೋವಿಡ್ ಮಾರ್ಗಸೂಚಿಯನ್ವಯ ಗಣರಾಜ್ಯೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.jkಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಕಾರ್ಯಕ್ರಮವು 40 ನಿಮಿಷಗಳಲ್ಲಿ ಮುಕ್ತಾಯವಾಗಲಿದೆ. ಪಥಸಂಚಲನ, ರಾಜ್ಯಪಾಲರ ಭಾಷಣ ಮಾತ್ರ ಇರಲಿದೆ ಎಂದಿದ್ದಾರೆ.

500 ಮಂದಿಗೆ ಆಸನ ವ್ಯವಸ್ಥೆRepublic Day-public-Access-Prohibition-BBMP- Commissioner-N.Manjunatha Prasad

ಕಾರ್ಯಕ್ರಮಕ್ಕೆ 500 ಮಂದಿಗೆ ಆಸನ ವ್ಯವಸ್ಥೆ ಮಾಡಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ಅವಕಾಶ. ಭದ್ರತೆಗಾಗಿ 7 ಮಂದಿ ಡಿಸಿಪಿ, 16 ಮಂದಿ ಎಸಿಪಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದರು.

key words : Republic Day-public-Access-Prohibition-BBMP- Commissioner-N.Manjunatha Prasad