ಗಣರಾಜ್ಯೋತ್ಸವ “ಪೆರೇಡ್‌”: ರಾಜ್ಯದ ಜನತೆ “ ದಾರಿ ತಪ್ಪಿಸಿತೆ” ಸರಕಾರ..!

The list of selected Tableaux for the 2026 Republic Day Parade in Delhi has already been published. No Tableaux from Karnataka have been included in this official list. Therefore, no Tableaux from Karnataka will participate in the Republic Day parade this time. However, the press release issued by the state's Information and Public Relations Department, stating that Karnataka's Tableaux will participate in the Republic Day parade under the theme "Millet to Microchip", has been accused of being completely false information.

 

ಬೆಂಗಳೂರು, ಜ.೨೩,೨೦೨೬: ದೆಹಲಿಯಲ್ಲಿ ನಡೆಯುವ 2026ರ ಗಣರಾಜ್ಯೋತ್ಸವ ಪೆರೇಡ್‌ಗೆ ಸಂಬಂಧಿಸಿದಂತೆ  ಈಗಾಗಲೇ ಆಯ್ಕೆಗೊಂಡ ಸ್ಥಬ್ಧಚಿತ್ರಗಳಪಟ್ಟಿ ಪ್ರಕಟಗೊಂಡಿದೆ.ಈ ಅಧಿಕೃತ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಸ್ಥಬ್ಧಚಿತ್ರಕ್ಕೆ ಸ್ಥಾನ ದೊರೆತಿಲ್ಲ. ಹಾಗಾಗಿ ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಯಾವುದೇ ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ.

ಆದರೆ, ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, “ಮಿಲ್ಲೆಟ್ ಟು ಮೈಕ್ರೋಚಿಪ್” ಎಂಬ ಥೀಮ್‌ನಡಿ ಕರ್ನಾಟಕದ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿದೆ ಎಂದಿರುವುದು  ಸಂಪೂರ್ಣ ತಪ್ಪು ಮಾಹಿತಿ ಎಂಬ ಆರೋಪ ಕೇಳಿ ಬಂದಿದೆ.

ಮೂಲಗಳು ತಿಳಿಸಿರುವಂತೆ….

ವಿವಿಧ ರಾಜ್ಯಗಳ ಸ್ಥಬ್ಧಚಿತ್ರಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಈ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯದ ತಜ್ಞ ಸಮಿತಿಯು ಹಲವು ಹಂತಗಳ ಪರಿಶೀಲನೆ, ಪ್ರದರ್ಶನ ಹಾಗೂ ಪ್ರಸ್ತುತಿ ಆಧಾರದ ಮೇಲೆ ಅಂತಿಮಗೊಳಿಸಿದೆ.

ಇಂತಹ ಸಂದರ್ಭದಲ್ಲಿ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, “ಮಿಲ್ಲೆಟ್ ಟು ಮೈಕ್ರೋಚಿಪ್” ಎಂಬ ಥೀಮ್‌ನಡಿ ಕರ್ನಾಟಕದ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿದೆ ಎಂದಿರುವುದು ಸಂಪೂರ್ಣ ತಪ್ಪು ಮಾಹಿತಿ.

ಈ “ಮಿಲ್ಲೆಟ್ ಟು ಮೈಕ್ರೋಚಿಪ್” ಥೀಮ್ ರಾಜ್ಯದ ಅಭಿವೃದ್ಧಿ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಮಹತ್ವಾಕಾಂಕ್ಷಿ ಪರಿಕಲ್ಪನೆಯಾಗಿದ್ದು, ಕೃಷಿಯಿಂದ ಹೈಟೆಕ್ ಉದ್ಯಮದವರೆಗೆ ಕರ್ನಾಟಕದ ಪ್ರಯಾಣವನ್ನು ತೋರಿಸುವ ಉದ್ದೇಶ ಇದರಲ್ಲಿ ಇತ್ತು. ಆದರೆ ಈ ಸ್ಥಬ್ಧಚಿತ್ರವನ್ನು ಕೇಂದ್ರ ಸರ್ಕಾರದ ಆಯ್ಕೆ ಸಮಿತಿ ಅಂತಿಮ ಪಟ್ಟಿ ಸೇರಿಸಿಲ್ಲ ಎಂಬ ವಾಸ್ತವ್ಯವನ್ನು ಮರೆಮಾಚಿ ಅಥವಾ ಪರಿಶೀಲಿಸದೇ ರಾಜ್ಯ ವಾರ್ತಾ ಇಲಾಖೆ ತಪ್ಪು ಪತ್ರಿಕಾ ಹೇಳಿಕೆ ನೀಡಿದೆ ಎನ್ನಲಾಗಿದೆ.

ಇದರಿಂದಾಗಿ ರಾಜ್ಯದ ಜನರಲ್ಲಿ ಗೊಂದಲ ಉಂಟಾಗಿದ್ದು, “ಕರ್ನಾಟಕದ ಸ್ಥಬ್ಧಚಿತ್ರ ಆಯ್ಕೆಯಾಗಿದೆ” ಎಂಬ ಭಾವನೆ ಮೂಡಿದೆ.   ಆದರೆ ಕೇಂದ್ರದ ಅಧಿಕೃತ ಪಟ್ಟಿ ಪರಿಶೀಲಿಸಿದಾಗ ಆ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಕಾಣಿಸದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ದಾಖಲೆ ಪರಿಶೀಲಿಸದೆ ಪ್ರಕಟಣೆ ನೀಡಿದೆಯೇ?

ಇದು ಕೇವಲ ಅಜಾಗರೂಕತೆಯೇ ಅಥವಾ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶಿತ ತಪ್ಪು ಮಾಹಿತಿಯೇ?  ಈ ಮೂಲಕ ಸರ್ಕಾರ ತನ್ನ ಸಾಧನೆಗಳನ್ನು ಅತಿರಂಜಿತವಾಗಿ ಪ್ರದರ್ಶಿಸಲು ಪ್ರಯತ್ನಿಸಿತೇ? ಎಂಬ ಪ್ರಶ್ನೆಗಳು ಎದ್ದಿವೆ.

ಗಣರಾಜ್ಯೋತ್ಸವದಂತಹ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯದಲ್ಲಿ ತಪ್ಪು ಮಾಹಿತಿ ನೀಡುವುದು ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ತಾ ಇಲಾಖೆ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯಗಳು ಹೆಚ್ಚುತ್ತಿವೆ.

key words: Republic Day Parade, State government, misleading the public, Tableaux, “Millet to Microchip”,

 

SUMMARY:

Republic Day Parade: Is the State government misleading the public.?

The list of selected Tableaux for the 2026 Republic Day Parade in Delhi has already been published. No Tableaux from Karnataka have been included in this official list. Therefore, no Tableaux from Karnataka will participate in the Republic Day parade this time.

However, the press release issued by the state’s Information and Public Relations Department, stating that Karnataka’s Tableaux will participate in the Republic Day parade under the theme “Millet to Microchip”, has been accused of being completely false information.