ನವದೆಹಲಿ,ಫೆಬ್ರವರಿ,6,2026 (www.justkannada.in): ರೆಪೋ ದರ 5.25ದರದಲ್ಲೇ ಮುಂದುವರೆಯಲಿದ್ದು ಯಾವುದೇ ಬದಲಾವಣೆ ಇಲ್ಲ ಎಂದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.
ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ರೆಪೊ ದರವನ್ನು ಬದಲಾಯಿಸದೆ ಯಥಾಸ್ಥಿತಿಯಲ್ಲಿ ಮುಂದುವರೆಸಿದೆ ಎಂದು ಆರ್ ಬಿಐ ಘೋಷಿಸಿದೆ. ಈ ನಿರ್ಧಾರದಿಂದ, ರೆಪೊ ದರವು 5.25% ಪ್ರತಿಶತದಲ್ಲೇ ಸ್ಥಿರವಾಗಿ ಮುಂದುವರಿಯಲಿದೆ. ಹಣಕಾಸು ನೀತಿ ಸಮಿತಿ ಸಭೆಯ ಫಲಿತಾಂಶವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ರೇಟ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದರು.
ಆರ್‌ಬಿಐ ಕಳೆದ ಡಿಸೆಂಬರ್‌ನಲ್ಲಷ್ಟೇ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿತ್ತು. ಇದೀಗ ಇದೇ ದರ ಮುಂದುವರೆಯಲಿದೆ ಎಂದು ಆರ್‌ಬಿಐ ಹೇಳಿದೆ.
Key words: Repo rate, 5.25%, No change, RBI Governor







