ಕೊಲೆ ವಿಚಾರ ತಿಳಿದು ಗಾಬರಿಯಾಯ್ತು: ರೇಣುಕಾಸ್ವಾಮಿ ಕುಟಂಬಕ್ಕೆ ನ್ಯಾಯ ಸಿಗಲಿ- ಹಿರಿಯ ನಟಿ ಉಮಾಶ್ರೀ

ಬೆಂಗಳೂರು,ಜೂನ್,12,2024 (www.justkannada.in):  ನಟ ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಿರಿಯ ನಟಿ ಉಮಾಶ್ರೀ,  ಕೊಲೆ ವಿಚಾರ ತಿಳಿದು ನನಗೆ ಗಾಬರಿಯಾಯ್ತು, ತನಿಖೆ ನಡೆದು ರೇಣುಕಾಸ್ವಾಮಿ ಕುಟಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಟಿ ಉಮಾಶ್ರೀ, ಇದು ಚಿತ್ರಂಗದಲ್ಲಿ ಆತಂಕ ಸೃಷ್ಟಿಸುವ ಘಟನೆ.   ವೃತ್ತಿ, ವೈಯಕ್ತಿಕ ಜೀವನದಲ್ಲಿ ಶಿಸ್ತು ಮುಖ್ಯ.  ನಟ ದರ್ಶನ್ ಒಳ್ಳೆಯ ಹುಡುಗ ಅಂತ ಅಂದುಕೊಂಡಿದ್ದವು.  ವಿಷಯ ಗೊತ್ತಾದ ಮೇಲೆ ನನಗೆ ಗಾಬರಿ ಗೊಂದಲ ಆಯಿತು.

ಪತಿ ಕಳೆದುಕೊಂಡ ಹೆಣ್ಣುಮಗಳ ನೋವು ಅರ್ಥವಾಗುತ್ತದೆ. ಇಂತಹ ಕೃತ್ಯ ಆಗಬಾರದಿತ್ತು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟಿ ಉಮಾಶ್ರೀ ಹೇಳಿದರು.

Key words: Renukaswamy, murder, case, actress, Umashree