Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Cinema ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ: 1 ಲಕ್ಷ ರೂ. ನೆರವು ನೀಡಿದ ನಟ ವಿನೋದ್ ರಾಜ್

ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ: 1 ಲಕ್ಷ ರೂ. ನೆರವು ನೀಡಿದ ನಟ ವಿನೋದ್ ರಾಜ್

ಚಿತ್ರದುರ್ಗ,ಜುಲೈ,26,2024 (www.justkannada.in):  ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ  ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ  ಸಾಂತ್ವನ ಹೇಳಿದ ನಟ ವಿನೋದ್ ರಾಜ್  1 ಲಕ್ಷ ರೂ. ನೆರವು ನೀಡಿದ್ದಾರೆ.

ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿರುವ ವಿನೋದ್‌ ರಾಜ್‌ ಅವರು  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ 1 ಲಕ್ಷರೂ. ಸಹಾಯಧನ ನೀಡಿದ್ದಾರೆ. ರೇಣುಕಾಸ್ವಾಮಿ ಪೋಷಕರು, ಪತ್ನಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಶಿವನಗೌಡ ಅವರು, ನಟ ವಿನೋದ್ ರಾಜ್ ಭೇಟಿ ನೀಡಿದ್ದು ಸಂತಸ ತಂದಿದೆ. ವಿನೋದ್ ರಾಜ್, ಮತ್ತು ಲೀಲಾವತಿ ಅವರ ಮೇಲೆ ನಮಗೆ ಅಪಾರ ಗೌರವವಿದೆ ಎಂದರು. ಹಾಗಯೇ ನನ್ನ ಮಗನನ್ನು ಕೊಂದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದರು.

ಕೆಲದಿನಗಳ ಹಿಂದೆಯಷ್ಟೇ ವಿನೋದ್ ರಾಜ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರನ್ನು ಭೇಟಿ ಮಾಡಿ ಬಂದಿದ್ದರು.

Key words: Renukaswamy, family, Rs 1 lakh, actor, Vinod Raj