ಮೈಸೂರಿನ ಅಪ್ಪು ಫ್ಯಾನ್ಸ್’ಗೆ ಗುಡ್ ನ್ಯೂಸ್ !

0
256

ಬೆಂಗಳೂರು, ಮಾರ್ಚ್ 12, 2021 (www.justkannada.in): 

ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರ ತಂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಅಪ್ಪು ಸಿನಿಮಾ ತೆಲುಗಿಗೆ ಡಬ್ಬಿಂಗ್ ಆಗಲಿದೆ.

ಚಿತ್ರ ಏಪ್ರಿಲ್ 1 ರಂದು ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಯುವರತ್ನ ಪ್ರಿ ರಿಲೀಸ್ ಈವೆಂಟ್ ಯುವ ಸಂಭ್ರಮ ಮಾರ್ಚ್ 20 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ.

ಈ ದಿನವೇ ಚಿತ್ರದ ಟ್ರೈಲರ್ ಕೂಡಾ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ಸಿನಿಮಾದಲ್ಲಿ ಪುನೀತ್ ಜೊತೆಗೆ ಸಯ್ಯೇಷಾ ನಾಯಕಿಯಾಗಿ ಅಭಿನಯಿಸಿದ್ದಾರೆ.