100 ಕೋಟಿ ಕ್ಲಬ್ ಸೇರಿದ ದರ್ಶನ್ ‘ಕುರುಕ್ಷೇತ್ರ’

ಬೆಂಗಳೂರು, ಸೆಪ್ಟೆಂಬರ್ 29, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ.

ಕೆಜಿಎಫ್ ನಂತರ ಕನ್ನಡ ಚಿತ್ರವೊಂದು ಈ ಮಟ್ಟಿಗಿನ ಯಶಸ್ಸು ಕಾಣುತ್ತಿರುವುದು ಇದು ಎರಡನೇ ಬಾರಿ. ಚಿತ್ರದ ಯಶಸ್ಸನ್ನು ಡಿ ಬಾಸ್ ದರ್ಶನ್ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಅಭಿನಯದ 50 ನೇ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿರುವ ಚಿತ್ರ ಮೂರನೇ ವಾರವೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ.