Tuesday, September 15, 2026

BDA Apartments

ಫೆ.4 ರಂದು ‘ನವರತ್ನ’ ರಿಲೀಸ್… BDA JK_Adv BDA Adv
Home Cinema ಫೆ.4 ರಂದು ‘ನವರತ್ನ’  ರಿಲೀಸ್…

ಫೆ.4 ರಂದು ‘ನವರತ್ನ’  ರಿಲೀಸ್…

ಬೆಂಗಳೂರು,ಫೆ,12,(www.justkannada.in): ಇದೇ ಫೆಬ್ರವರಿ 14 ರಂದು ರಾಜ್ಯಾಧ್ಯಂತ ನವರತ್ನ ಚಿತ್ರ  ಬಿಡುಗಡೆಯಾಗುತ್ತಿದೆ.

ಸಿನಿಮಾ ಪ್ರಮೋಷನ್, ಚಿತ್ರದ ಬಿಡುಗಡೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನವರತ್ನ ಚಿತ್ರದ ನಟ, ನಿರ್ದೇಶಕ ಪ್ರತಾಪ್ ರಾಜ್, ಫೆಬ್ರವರಿ 14ರ ಪ್ರೇಮಿಗಳ ದಿನದಂದು ನವರತ್ನ ಚಿತ್ರ ಬಿಡುಗಡೆ ಆಗುತ್ತಿದೆ. ರಾಜ್ಯಾಧ್ಯಂತ ತೆರೆಯನ್ನು ಕಾಣಲಿದೆ. ಈ ಚಿತ್ರದಲ್ಲಿ ಎಲ್ಲರನ್ನು ಸೆಳೆಯುವಂತ ಚಿತ್ರಕತೆ ಇದೆ ಎಂಬುದಾಗಿ ತಿಳಿಸಿದರು.

ಎಲ್ಲಾ ವಯೋಮಾನದ ನೋಡುಗರ ದೃಷ್ಠಿಯಿಂದ ಚಿತ್ರಕತೆ ಒಳಗೊಂಡಿದೆ. ಇಂತಹ ಚಿತ್ರವನ್ನು ತಪ್ಪದೇ ಚಿತ್ರಮಂದಿರಕ್ಕೆ ತೆರಳಿ, ಪ್ರೇಕ್ಷಕರು ನೋಡಿ, ನಮ್ಮನ್ನು ಹರಸಿ, ಹಾರೈಸಿ ಎಂಬುದಾಗಿ ನವರತ್ನ ಚಿತ್ರದ ನಟ, ನಿರ್ದೇಶಕ ಪ್ರತಾಪ್ ರಾಜ್ ಮನವಿ ಮಾಡಿದ್ದಾರೆ.