ಪಿವಿಆರ್’ನಲ್ಲಿ ಕುಳಿತು ಟಿ-20 ವಿಶ್ವಕಪ್ ಮ್ಯಾಚ್ ನೋಡುವ ಚಾನ್ಸ್ !

ಬೆಂಗಳೂರು, ಅಕ್ಟೋಬರ್ 16, 2021 (www.justkannada.in): ಈ ಬಾರಿ ICC ಪುರುಷರ ಟಿ20 ವಿಶ್ವಕಪ್ ಪಂದ್ಯಗಳನ್ನು ಪಿವಿಆರ್ ಸಿನೆಮಾಸ್ ನಲ್ಲಿ ಕುಳಿತು ವೀಕ್ಷಿಸಬಹುದಾಗಿದೆ!

ಹೌದು. ಐಸಿಸಿ ಟಿ20 ವಿಶ್ವಕಪ್ 2021ರ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಗಳ ನೇರ ಪ್ರದರ್ಶನದ ಹಕ್ಕುಗಳನ್ನು ಪಡೆದುಕೊಂಡಿದ್ದೇನೆ ಎಂದು ಮಲ್ಟಿಪ್ಲೆಕ್ಸ್ ಚೈನ್ ಪಿವಿಆರ್ ಸಿನೆಮಾಸ್ ತಿಳಿಸಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ರ ಅಖಿಲ ಭಾರತ ಪಂದ್ಯಗಳ ನೇರ ಪ್ರದರ್ಶನಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಯೊಂದಿಗೆ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ನವದೆಹಲಿ, ಮುಂಬೈ, ಪುಣೆ ಮತ್ತು ಅಹಮದಾಬಾದ್ ಸೇರಿದಂತೆ 35 ಪ್ಲಸ್ ನಗರಗಳಲ್ಲಿ 75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಂದ್ಯಗಳನ್ನು ಪ್ರದರ್ಶಿಸಲಾಗುವುದು ಎಂದು ಮಲ್ಟಿಪ್ಲೆಕ್ಸ್ ಚೈನ್ ತಿಳಿಸಿದೆ.