ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ: ಚಂದನ್ ಶೆಟ್ಟಿ ‘ಕೋಲುಮಂಡೆ’ ಹಾಡಿಗೆ ಭಾರಿ ಆಕ್ರೋಶ…

ಮೈಸೂರು,ಆ,25,2020(www.justkannada.in): 1996ರಲ್ಲಿ ತೆರೆಕಂಡಿದ್ದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅಭಿನಯದ  ಜನುಮದ ಜೋಡಿ ಸಿನಿಮಾದಲ್ಲಿನ ಕೋಲುಮಂಡೆ ಸಾಂಗು ಕೇಳದವರೇ ಇಲ್ಲ. ಎಲ್​.ಎನ್​ ಶಾಸ್ತ್ರಿ ಅವರ ಕಂಠದಿಂದ ಮೂಡಿಬಂದಿದ್ದ ಈ ಹಾಡನ್ನ ಎಲ್ಲರೂ ತಲೆದೂಗಿ ಕೇಳುತ್ತಿದ್ದರು.

ಈ ಮಧ್ಯೆ ಇದೇ ಹಾಡು ಇತ್ತೀಚೆಗೆ ವಿಡಿಯೋ ಆಲ್ಬಂ ಆಗಿ ಹೊರಹೊಮ್ಮಿದ್ದು, ರ್ಯಾಪರ್ ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಆದರೆ ಇದೀಗ ಚಂದನ್ ಶೆಟ್ಟಿ ಅವರ ಈ ಹೊಸ ಹಾಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  ಹೌದು ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ಕೊಲುಮಂಡೆ ಹಾಡನ್ನ ಅಶ್ಲಿಲವಾಗಿ ಚಿತ್ರಿಕರಿಸಿ ಭಾವನೆಗೆ ಧಕ್ಕೆ ತಂದ ಆರೋಪ ಕೇಳಿಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.religious-sentiment-kolumande-song-chandan-shetty-outrage

ಮಲೈಮಹದೇಶ್ವರ ಸ್ವಾಮಿ ಇತಿಹಾಸ ತಿರುಚಿ ಹಾಡು ರಚಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಚಂದನ್ ಶೆಟ್ಟಿ ವಿರುದ್ದ ಹಳೆ ಮೈಸೂರು ಭಾಗದ ಜನರು ಆರೋಪಿಸಿದ್ದಾರೆ.  ಮಹದೇಶ್ವರ ಇತಿಹಾಸ ತಿರುಚಿ ಹಾಡು ಚಿತ್ರಿಕರಿಸಲಾಗಿದೆ. ಶರಣೆ ಸಂಕಣ್ಣೆರನ್ನ ಅಶ್ಲಿಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಣ್ಣೆರನ್ನ ಅವಮಾನಿಸಲಾಗಿದೆ. ಹಳೇ ಜಾನಪದ ಹಾಡೋಂದನ್ನ ತನ್ನ ಲಾಭಕ್ಕಾಗಿ ಬಳಸಿಕೊಂಡು ವಿಕೃತಿ ಮೆರೆದಿದ್ದಾರೆ. ಈ ಕೂಡಲೆ ಚಂದನ್ ಹಾಡಿರುವ ಕೊಲುಮಂಡೆ ಹಾಡನ್ನ ಯೂಟ್ಯೂಬ್‌ನಿಂದ ತೆಗೆಯಬೇಕು‌. ಇಲ್ಲವಾದಲ್ಲಿ ಚಂದನ್ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಚಂದನ್ ಹಾಡಿರುವ ಕೊಲುಮಂಡೆ ಹಾಡನ್ನ ಯೂಟ್ಯೂಬ್‌ನಿಂದ ತೆಗೆಯದಿದ್ದರೇ ರಾಜ್ಯದಲ್ಲಿ  ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: religious –sentiment-kolumande-song- Chandan Shetty- Outrage