Wednesday, October 7, 2026

BDA Apartments

immense respect BDA JK_Adv BDA Adv
Home Front Page ತಮಿಳುನಾಡಿಗೆ ನೀರು ಹರಿಬಿಟ್ಟ ಸರ್ಕಾರ: ಕಬಿನಿ ಡ್ಯಾಂ ನೀರಿನ ಮಟ್ಟ74 ಅಡಿಗೆ ಕುಸಿತ

ತಮಿಳುನಾಡಿಗೆ ನೀರು ಹರಿಬಿಟ್ಟ ಸರ್ಕಾರ: ಕಬಿನಿ ಡ್ಯಾಂ ನೀರಿನ ಮಟ್ಟ74 ಅಡಿಗೆ ಕುಸಿತ

ಮೈಸೂರು,ಆಗಸ್ಟ್,22,2026 (www.justkannada.in):  ಉತ್ತಮ ಮಳೆಯಿಂದಾಗಿ ಸಂಪೂರ್ಣವಾಗಿ ಭರ್ತಿಯಾಗಿದ್ದ  ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ನೀರಿನ ಮಟ್ಟ ಕುಸಿತ ಕಂಡಿದೆ.

ಹತ್ತು ದಿನಕ್ಕೆ ಬರೋಬ್ಬರಿ 10 ಅಡಿ ನೀರು ಖಾಲಿಯಾಗಿದ್ದು ಅಧಿಕಾರಿಗಳು ಪ್ರತಿ‌ ದಿನ ತಮಿಳುನಾಡಿಗೆ  ಕಬಿನಿ ಡ್ಯಾಂ ನಿಂದ ಒಂದು ಟಿಎಂಸಿ ನೀರು ಹರಿಬಿಡುತ್ತಿದ್ದಾರೆ. ದಿನೇ ದಿನೇ ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚುತ್ತಲೇ ಇದ್ದು ಇಂದು ಬರೋಬ್ಬರಿ 13,000 ಕ್ಯೂಸೆಕ್ ಗೆ ಏರಿಕೆಯಾಗಿದೆ.  ಜಲಾಶಯದ ಒಳಹರಿವಿನ ಪ್ರಮಾಣ 7500 ಸಾವಿರ ಕ್ಯೂಸೆಕ್ ಇದೆ. ತಮಿಳುನಾಡಿಗೆ ನಿತ್ಯ 12,000 ಅಧಿಕ ಕ್ಯೂಸೆಕ್ ಅಧಿಕ ನೀರು  ಬಿಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿದೆ.ತಮಿಳುನಾಡಿಗೆ ನೀರು ಹರಿಬಿಟ್ಟ ಸರ್ಕಾರ: ಕಬಿನಿ ಡ್ಯಾಂ ನೀರಿನ ಮಟ್ಟ74 ಅಡಿಗೆ ಕು...

ಜಲಾಶಯದ ಒಟ್ಟು ಎತ್ತರ 84 ಅಡಿಗಳಿದ್ದು ಕಳೆದ ವಾರ ಸಂಪೂರ್ಣ ಭರ್ತಿಯಾಗಿತ್ತು.  ಆದರೆ ಇದೀಗ ಕೇವಲ 74 ಅಡಿಗೆ ಕಬಿನಿ ಡ್ಯಾಂ ನೀರಿನ ಮಟ್ಟ ಕುಸಿದಿದೆ.  ಜಲಾಶಯದ ಒಟ್ಟು ಸಾಮರ್ಥ್ಯ 19.52 ಟಿಎಂಸಿ. ಜಲಾಶಯದಲ್ಲಿ ಉಳಿದಿರುವ ನೀರಿನ ಪ್ರಮಾಣ ಕೇವಲ 13.90 ಟಿಎಂಸಿ ಮಾತ್ರವಿದೆ.ತಮಿಳುನಾಡಿಗೆ ನೀರು ಹರಿಬಿಟ್ಟ ಸರ್ಕಾರ jk02_new jk02 new

ತಮಿಳುನಾಡು ಸರ್ಕಾರಕ್ಕೆ ಮಣಿದು ತಮಿಳುನಾಡಿಗೆ ನೀರು ಹರಿಸುವ ಮೂಲಕ ಕರ್ನಾಟಕ ಸರ್ಕಾರ ಕಬಿನಿ ಡ್ಯಾಂ ಖಾಲಿ ಮಾಡುತ್ತಿದ್ದು ರಾಜ್ಯ ಸರ್ಕಾರದ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Government, releases, water , Tamil Nadu, Kabini Dam, water, Empty