Saturday, August 22, 2026

BDA Apartments

Home Front Page ರಾಜ್ಯದಲ್ಲಿ ಉತ್ತಮ ಮಳೆ: ಎರಡು ದಿನಗಳಲ್ಲಿ ನಾಲೆಗಳಿಗೆ ನೀರು ಬಿಡಿ- ರೈತ ಸಂಘದ ಅಧ್ಯಕ್ಷ ಬಡಗಲಪುರ...

ರಾಜ್ಯದಲ್ಲಿ ಉತ್ತಮ ಮಳೆ: ಎರಡು ದಿನಗಳಲ್ಲಿ ನಾಲೆಗಳಿಗೆ ನೀರು ಬಿಡಿ- ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ.

ಮೈಸೂರು,ಜುಲೈ,25,2023(www.justkannada.in): ರಾಜ್ಯದಲ್ಲಿ ಇಷ್ಟು ದಿನ ಬರದ ಛಾಯೆ ಇತ್ತು. ಆದರೆ ಈಗ ಮಳೆ ಬಂದು ರೈತರ ಜೀವ ಉಳಿದಂತಾಗಿದೆ. ರಾಜ್ಯದಲ್ಲಿ ವಿವಿಧ ರೀತಿಯ ವಸ್ತು ಸ್ಥಿತಿ ಇದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬುವ ಹಂತಕ್ಕೆ ಬಂದಿದೆ. ಕೃಷಿಗಾಗಿ ಎರಡು ದಿನದಲ್ಲಿ ನಾಲೆಗಳಿಗೆ ನೀರು ಬಿಡಿ ಎಂದು ಸರ್ಕಾರಕ್ಕೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಬಡಗಲಪುರ ನಾಗೇಂದ್ರ, ಮುಂದಿನ ತಿಂಗಳಲ್ಲಿ ರೈತರು ಭತ್ತ ನಾಟಿ ಮಾಡಬೇಕು. ಇಲ್ಲವಾದರೆ ಭತ್ತ ಫಸಲು ಬರಲ್ಲ. ಹೀಗಾಗಿ ಭತ್ತ ನಾಟಿಗೆ ನೀರು ನೀಡಲು ಸಿದ್ದತೆ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲಾ ಸಮಿತಿಗಳು ಸಭೆ ಸೇರಿ ಕೃಷಿಗೆ ನೀರು ನೀಡುವಂತೆ ಒತ್ತಾಯಿಸಿದರು.

ರೈತರ ಅನುಭವದ ಮೇಲೆ ಐಸಿಸಿ ನೀರು ಬಿಡುಗಡೆ ಬಗ್ಗೆ ತೀರ್ಮಾನ ಮಾಡಬೇಕು. ರಾಜ್ಯದಲ್ಲಿ ಬರದ ಛಾಯೆ 100 ತಾಲೂಕಿನಲ್ಲಿ ಇನ್ನೂ ಇದೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಒಣಗುತ್ತಿದೆ. ಈ ಕುರಿತು ಚಳುವಳಿ ಮಾಡಿದ ನಂತರ ನೀರು ಬಿಟ್ಟಿದ್ದಾರೆ. ಈಗ ಹೋಗುತ್ತಿದ್ದ ಪ್ರಾಣ ಉಳಿಸಿದಂತಿದೆ. ನಾಳೆಯೊಳಗೆ ಕೆ.ಆರ್ ಎಸ್ 110 ಅಡಿ ತುಂಬುವ ಸಾಧ್ಯತೆಯಿದೆ. ಈಗ ನಾವು ಭತ್ತ ಹಾಕುವ ಸಮಯ. ಆಗಸ್ಟ್ ಒಳಗೆ ನಾವು ನಾಟಿ ಮಾಡಬೇಕು. ಸ್ವಲ್ಪ ತಡವಾದರೂ ಬೆಳೆ ನಷ್ಟ ಆಗತ್ತೆ. ಹಾಗಾಗಿ ಅಧಿಕಾರಿಗಳು ಭತ್ತ ಬೆಳೆಯಲು ನೀರು ಕೊಡುವ ಕುರಿತು ಸಭೆ ನಡೆಸಬೇಕು. ಮುಂಗಾರು ಭತ್ತ ಬೆಳೆಯಲು ಸಹಕಾರ ನೀಡಬೇಕು. ಕೆರೆಕಟ್ಟೆಗಳನ್ನು ತುಂಬುವ ನಿಟ್ಟಿನಲ್ಲಿ ಎಲ್ಲವನ್ನೂ ಮೀಟಿಂಗ್ ಮಾಡಿ ತೀರ್ಮಾನ  ಮಾಡಬೇಕು ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಕೇಂದ್ರ ಸರ್ಕಾರ ಎಫ್ ಆರ್ ಪಿ ಜಾರಿಗೊಳಿಸಲು ನಿರ್ಧರಿಸಿದೆ. ಇಳುವರಿ ಆದಾರದ ಮೇಲೆ ಹಣ ನೀಡುವ ಮಾನದಂಡವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿವವರೆಗೂ ಅದನ್ನ ಹಳೆ ಬಿಲ್ ಆಧಾರದ ಮೇಲೆ ನೀಡಿ. ಆದರೇ ಬಣ್ಣಾರಿ ಸೇರಿದಂತೆ ಇತರೇ ಕಾರ್ಖಾನೆಗಳು ಫೈನಲ್ ಬಿಲ್ ಬಿಡುಗಡೆ ಮಾಡಿಲ್ಲ. ಕಾರ್ಖಾನೆ ಮತ್ತೆ ಶುರು ಮಾಡುವ ಮುನ್ನ ಕಬ್ಬು ಬೆಳೆಯ ಹಳೆ ಪೇಮೆಂಟ್ ನೀಡಿ. ಹಳೆ ಆದೇಶದ ಮೇರೆಗೆ ಬಾಕಿ ಹಣ ನೀಡಿ. ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿದೆ. ಕೇಂದ್ರ ಸರ್ಕಾರದ ಈ ಎಫ್ ಆರ್ ಪಿಯಿಂದ ಕಾರ್ಖಾನೆಗಳ ಮಾಲೀಕರಿಗೆ ಲಾಭವಾಗುತ್ತಿದೆ. ಈಗ ಎಫ್ಆರ್ ಪಿ 10.25 ಏರಿಕೆ ಮಾಡಿದೆ. ಇದನ್ನ 8.5ಕ್ಕೆ ಸೀಮಿತ ಗೊಳಿಸಿ ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ದೇಶದಲ್ಲಿ ಕೊಬ್ಬರಿ ಬೆಳೆ ಬೆಲೆ ನೆಲಕಚ್ಚಿದೆ. ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಬೆಲೆ ಸುಧಾರಣೆಗೆ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಆಮದು ರಪ್ತು ನಿಂದ ಈ ಸಮಸ್ಯೆ ಉಂಟಾಗಿದೆ. ರಾಜ್ಯ ಸರ್ಕಾರ  ಬೆಂಬಲ ಬೆಲೆ ಅಂತ 1700 ರೂ.ನಿಗದಿ ಮಾಡಿದೆ. ಆದರೆ ನಾವು ಕೇಳಿದ್ದು 5ಸಾವಿರ ರೂ. ಕನಿಷ್ಠ 2ಸಾವಿರ ರೂ. ಆದ್ರೂ ಬೆಂಬಲ ಬೆಲೆ ನೀಡಿ ಎಂದು ಮನವಿ ಮಾಡಿದರು.

ಆಗಸ್ಟ್ 12ರಂದು ಕೊಬ್ಬರಿ ಬೆಳೆಯುವ ಜಿಲ್ಲೆಗಳ ಎಂಪಿಗಳ ಮನೆಗಳ ಮುಂದೆ ಪಿಕೆಟಿಂಗ್ ಮಾಡಲಾಗುವುದು.15 ಜಿಲ್ಲೆಗಳಲ್ಲಿ ಪಿಕೆಟಿಂಗ್ ನಡೆಯಲಿದೆ. ಅಕ್ಟೋಬರ್ 2 ರಂದು ತಿಪಟೂರಿನಿಂದ ಬೆಂಗಳೂರಿಗೆ 50ಸಾವಿರ ರೈತರು ಚಳುವಳಿ ಪಾದಯಾತ್ರೆ ಮಾಡಲಿದ್ದೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಹಿನ್ನಲೆ ಈ ಕುರಿತು ಮಾತನಾಡಿದ ಬಡಗಲಪುರ ನಾಗೇಂದ್ರ, ಸರಿಯಾದ ಸಮಯದಲ್ಲಿ ರೈತರಿಗೆ ನೀರು ಕೊಡಿ. ರೈತರೇ ಭತ್ತ ಬೆಳೆದು ನಿಮಗೆ ಕೊಡ್ತಾರೆ. ಅಕ್ಕಿಕಾಗಿ ಕೇಂದ್ರದ ಮುಂದೆ ಕೈ ಚಾಚಿದ್ರು. 34 ರೂಪಾಯಿ ಕೊಡ್ತೀವಿ ಅಂದ್ರು ಕೇಂದ್ರ ಅಕ್ಕಿ ಕೊಡಲಿಲ್ಲ . ಅದೇ ಅಕ್ಕಿಯನ್ನು  ಓಪನ್ ಮರ್ಕೆಟ್ ನಲ್ಲಿ 31 ರೂಪಾಯಿಗೆ ಕೊಟ್ಟಿದ್ದಾರೆ. ಛತ್ತೀಸಗಡ ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲಿ ಅಕ್ಕಿ ಕೊಳ್ಳಲು ಮುಂದಾದ್ರು. ಎಲ್ಲೂ ಅಕ್ಕಿ ಸಿಗಲಿಲ್ಲ. ರೈತರಿಗೆ ನೀರು ನೀಡಿ ರೈತರೇ ಭತ್ತ ಬೆಳೆದು ಅಕ್ಕಿ ಕೊಡುತ್ತಾರೆ. 2 ದಿನದಲ್ಲಿ ರೈತರ ನಾಲೆಗಳಿಗೆ ನೀರು ಬಿಡಿ ಎಂದು ಆಗ್ರಹಿಸಿದರು.

Key words: release -water – canals – two days – Badgalpur Nagendra