ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಬಿಡುಗಡೆ ಮಾಡಲಿ- ಅಶ್ವಥ್ ನಾರಾಯಣ್ ಗೆ ಹೆಚ್.ಡಿಕೆ ಸವಾಲು.

ಬೆಂಗಳೂರು,ಮೇ,11,2022(www.justkannada.in):  ನನ್ನ ವಿರುದ‍್ಧ ಏನೇ ದಾಖಲೆಗಳಿದ್ದರೂ ಬಿಡುಗಡೆ ಮಾಡಲಿ ಎಂದು ಸಚಿವ ಅಶ್ವಥ್ ನಾರಾಯಣ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದಲ್ಲಿ ನಿಮ್ಮಂತೆ ನಾನು ಲೂಟಿ ಮಾಡಿಲ್ಲ. ಲೂಟಿ ಮಾಡುತ್ತಿರುವುದು ನೀವು. ನನ್ನ ವಿರುದ್ಧ ದಾಖಲೆಗಳಿದ್ದರೇ  ತಾಕತ್ತಿದ್ದರೇ ನಾಳೆಯೇ ಆ ದಾಖಲೆ ಬಿಡುಗಡೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.state-government-own-decisions-without-looking-center-advice-former-cm-hd-kumaraswamy

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ 450 ಕೋಟಿ ಅಕ್ರಮ ನಡೆದಿದೆ.   ನಮ್ಮ ಬಳಿ ಇರುವ  ದಾಖಲಾತಿ ನಿಮ್ಮ ಬಳಿ ಇಲ್ಲ. ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರದಿಂದ ಮಾತನಾಡಿ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿಕಾರಿದರು.

Key words: release – documents – against –me-HDK -Challenge – Ashwath Narayan